ಇಸ್ರೇಲ್ ಸೈನಿಕರನ್ನು ಹಿಂಸಿಸಿ ಕೊಲೆಗೈದ ಹಮಾಸ್ ಉಗ್ರರು: ‘ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್’ ಹೆಸರಲ್ಲಿ ದಾಳಿ
ಹಮಾಸ್ ಉಗ್ರರ ಹೆಡೆಮುರಿಕಟ್ಟಲು ಹೊರಟ ಇಸ್ರೇಲ್
100ಕ್ಕು ಹೆಚ್ಚು ಇಸ್ರೇಲಿಗರನ್ನು ಬಲಿ ಪಡೆದ ಹಮಾಸ್
300ಕ್ಕೂ ಹೆಚ್ಚು ಹಮಾಸ್ ಉಗ್ರರು ಬಲಿ ಪಡೆದ ಇಸ್ರೇಲ್
ಗಾಜಾ ನಿವಾಸಿಗಳಿಗೆ ಹೊರಟು ಬಿಡಿ ಎಂದ ನೇತನ್ಯಾಹು
ತಣ್ಣಗಿದ್ದ ಇಸ್ರೇಲ್ ಅನ್ನು ಹಮಾಸ್ ಉಗ್ರರು ಕೆಣಕಿದ್ದಾರೆ. ಬರೀ ಕೆಣಕೋದೇನು, ಇಸ್ರೇಲಿಗರನ್ನು ಬಡಿದೆಬ್ಬಿಸಿದ್ದಾರೆ. ಇದ್ದಕ್ಕಿದ್ದಂತೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದೆ ಹಮಾಸ್. ಈ ಹಮಾಸ್ ಉಗ್ರರು ಇಸ್ರೇಲ್ನೊಳಗೆ(Isreal) ನುಗ್ಗಿ ನಾಗರಿಕರ ಹತ್ಯೆಯಲ್ಲಿ ತೊಡಗಿದ್ದಾರೆ. ಡಿಧೀರ್ ಈ ಬೆಳವಣೆಗೆಗೆ ಇಂಕಿತ್ತಲೂ ಎದೆಗುಂದದ ಇಸ್ರೇಲ್ ತಕ್ಷಣ ಯುದ್ಧ ಘೋಷಣೆ ಮಾಡಿದೆ. ಶನಿವಾರ ಬೆಳಗಿನ ಜಾವ ಎಂದಿನಂದ ಆಗ ತಾನೇ ಎಚ್ಚರವಾಗುತ್ತಿತ್ತು ಇಸ್ರೇಲ್. ಆಗ ತಾನೇ ಎಚ್ಚರಗೊಳ್ಳುತ್ತಿದ್ದ ಇಸ್ರೇಲ್ಗೆ ಗಾಜಾದ(Gaza) ಹಮಾಸ್ ಉಗ್ರರು ಬಿಗ್ ಶಾಕ್ ಕೊಟ್ಟಿದ್ದರು. ಶನಿವಾರ ಬೆಳಗಿನ ಜಾಗ ಹಮಾಸ್(Hamas) ಉಗ್ರರು, ಇಸ್ರೇಲ್ ಮೇಲೆ ಭಾರಿ ಪ್ರಮಾಣದ ರಾಕೆಟ್ ದಾಳಿಯನ್ನೇ ನಡೆಸಿತ್ತು. ಹಮಾಸ್‌ನ ದಾಳಿ ಅತ್ಯಂತ ದೊಡ್ಡ ಪ್ರಮಾಣದ ದಾಳಿಯಾಗಿತ್ತು. ಇಸ್ರೇಲ್‌ನತ್ತ ಗುರಿಯಿಟ್ಟು ರಾಕೆಟ್ ದಾಳಿ ಮಾಡಿದ ಹಮಾಸ್, ಬರೋಬ್ಬರಿ ಐದು ಸಾವಿರ ರಾಕೆಟ್ ದಾಳಿ ಮಾಡಿತ್ತು. ಈ ಐದು ಸಾವಿರ ರಾಕೆಟ್ ದಾಳಿಗೆ ನೂರಕ್ಕೂ ಹೆಚ್ಚು ಇಸ್ರೇಲಿಗರ ಸಾವಾಗಿತ್ತು ಹಾಗೆನೇ ಇಸ್ರೇಲ್ನ ದೊಡ್ಡ ದೊಡ್ಡ ಕಟ್ಟಡಗಳು ನೆಲಸಮವಾಗಿದ್ದವು. ಬೆಳಗಿನ ಜಾವ ರಾಕೆಟ್ ದಾಳಿ ನಡೆದ ಹಮಾಸ್ ಉಗ್ರರು, ಅದರ ನಂತರ ಗಾಜಾದಲ್ಲಿದ್ದ ತಡೆಗೋಡೆ ಮೂಲಕ, ನೂರಾರು ಹಮಾಸ್ ಉಗ್ರರು ಇಸ್ರೇಲ್ನೊಳಗೆ ನುಗ್ಗಿ ಬಂದಿದ್ದರು. ಇಸ್ರೇಲ್ ಗಡಿಯೊಳಗೆ ಬಂದ ಈ ಪಾಪಿಷ್ಟ ಹಮಾಸ್ ಉಗ್ರರು, ಪಕ್ಕದಲ್ಲಿದ್ದ ಹಳ್ಳಿಗಳ ಮೇಲೆ ದಾಳಿಗೆ ನಿಂತರು. ಸಿಕ್ಕ ಸಿಕ್ಕವರನ್ನು ಗುಂಡಿಟ್ಟು ಕೊಲ್ಲ ತೊಡಗಿದರು.
ಇದನ್ನೂ ವೀಕ್ಷಿಸಿ: 1949ರಲ್ಲಿ ನಡೆದಿತ್ತು ಇಸ್ರೇಲ್‌ನ ಮೊದಲ ಯುದ್ಧ! 2023ರ ಈ ಯುದ್ಧವೇ ಅಂತಿಮ ಸಮರನಾ..?