Asianet Suvarna News Asianet Suvarna News

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಮತ್ತೊಂದು ಹೊಸ ತಳಿ ಪತ್ತೆ!

-ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ  AY 4.2 ಹೊಸ ತಳಿ ಪತ್ತೆ
-ಚೀನಾ, ರಷ್ಯಾಗಳಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಪ್ರಕರಣ
-100 ಕೋಟಿ ಲಸಿಕೆ ಗಡಿ ದಾಟಿದ  ಸಂಭ್ರಮದಲ್ಲಿರುವ ಭಾರತಕ್ಕೆ ಆತಂಕ
 

First Published Oct 23, 2021, 1:06 PM IST | Last Updated Oct 23, 2021, 3:03 PM IST

ಲಂಡನ್(ಅ.23) : ಇಡೀ ವಿಶ್ವಕ್ಕೆ ಮಹಾಮಾರಿ ಕೊರೋನಾ(Covid 19) ಹಂಚಿದ ನೆರೆಯ ಚೀನಾದಲ್ಲಿ ಮತ್ತೆ ಭಯಾನಕ ವೈರಸ್‌ ಹರಡುವಿಕೆಯ ಸುಳಿವು ಕಂಡುಬಂದಿದೆ. ಈಗ ಬ್ರಿಟನ್‌ನಲ್ಲೂ ಕೊರೋನಾ ವೈರಸ್‌ನ  AY4.2 ಹೊಸ ತಳಿ ಪತ್ತೆಯಾಗಿದೆ.  ಯುರೋಪ್ ದೇಶದಲ್ಲಿನ ಕೊರೋನಾ ವೈರಸ್ ಪ್ರಕರಣಗಳಲ್ಲಿ ಶೇಕಡಾ 7 ರಷ್ಟು ಏರಿಕೆಯಾಗಿದೆ ವಾರದಲ್ಲಿ ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ಶೇಕಡಾ 1.9 ರಷ್ಟು ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಬ್ರಿಟನ್‌ನಲ್ಲಿ 52,000 ಕೊರೋನಾ ಹೊಸ ಕೇಸ್‌ಗಳು ಪತ್ತೆಯಾಗಿವೆ. ಜುಲೈ 17ರ ಬಳಿಕ ಯುಕೆನಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿ್ತ್ತು. ಆದರೆ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಯುಕೆನಲ್ಲಿ 50,000 ಕೊರೋನಾ ಪ್ರಕರಣ ದಾಖಲಾಗಿದೆ. ಇದು ಜುಲೈ ಬಳಿಕ ದಾಖಲಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ. 

ಬ್ರಿಟನ್‌ನಲ್ಲಿ ಕೊರೋನಾ ಹೊಸ ವೈರಸ್: ಒಂದೇ ದಿನ 52,000 ಕೇಸ್‌!

ರಷ್ಯಾದಲ್ಲೂ ಕೂಡ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ 37,000 ಪ್ರಕರಣಗಳು ಪತ್ತೆಯಾಗಿವೆ ಹಾಗೂ 1,000 ಜನ ಕೊರೋನಾಗೆ ಬಲಿಯಾಗಿದ್ದಾರೆ. ಉಕ್ರೇನ್‌ ನಲ್ಲಿ 22,415 ಕೊರೋನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲ ಬಾರಿಗೆ ಇಷ್ಟು ಕೇಸ್‌ಗಳು ದಾಖಲಾಗಿವೆ.  ಭಾರತ 100 ಕೋಟಿ ಲಸಿಕೆ ಗಡಿ ದಾಟಿದ ಸಂಭ್ರಮದಲ್ಲಿದೆ. ಇತ್ತ ಕೊರೋನಾ ಕೂಡ ನಿಯಂತ್ರಣದಲ್ಲಿದೆ. ಹೀಗಾಗಿ 100 ಕೋಟಿ ಲಸಿಕೆ ಸಾಧನೆಯನ್ನು ಭಾರತ(India) ಆಚರಿಸಿದೆ. ಆದರೆ ಇದರ ಬೆನ್ನಲ್ಲೇ ಚೀನಾ, ರಷ್ಯಾ ಮತ್ತು ಬ್ರಿಟನ್‌ಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸ್ಱಷ್ಟಿಸಿದೆ. ಹೀಗಾಗಿ ಮತ್ತೆ ಕಠಿಣ ನಿರ್ಬಂಧಗಳು ಜಾರಿ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ.

Video Top Stories