ಭಾರತೀಯರನ್ನು ಇಸ್ರೇಲಿಗರು ಗೌರವದಿಂದ ಕಾಣುತ್ತಾರೆ: ಇಸ್ರೇಲ್‌ನಲ್ಲಿನ ಕನ್ನಡಿಗರ ಮಾತು

ಇಸ್ರೇಲ್‌ನಲ್ಲಿ ಭಾರತೀಯರನ್ನು ಗೌರವದಿಂದ ಕಾಣುತ್ತಾರೆ. ಇಲ್ಲಿ ನಮಗೆ ಸೈರನ್‌ ಶಬ್ಧ ಅಭ್ಯಾಸವಾಗಿದೆ ಎಂದು ಇಸ್ರೇಲ್‌ನಲ್ಲಿ ಇರುವ ಕನ್ನಡಿಗರು ಹೇಳುತ್ತಾರೆ.

First Published Oct 20, 2023, 1:07 PM IST | Last Updated Oct 20, 2023, 1:07 PM IST

ಇಸ್ರೇಲ್ ಯುದ್ಧ ಭೂಮಿಯಲ್ಲಿ ಇರುವ ಕನ್ನಡಿಗರ ಜೊತೆ ಅಜಿತ್‌ ಹನಮಕ್ಕನವರ್‌ ಮಾತನಾಡಿದ್ದಾರೆ. ಅಲ್ಲಿರುವ ಕನ್ನಡಿಗರ(Kannadigas) ಪೈಕಿ ಕರಾವಳಿಯವರೇ ಹೆಚ್ಚಿದ್ದಾರೆ. ಇಸ್ರೇಲ್‌ನ(Israel) ಟೆಲ್‌ಅವಿವ್‌ನಲ್ಲೇ 5 ಸಾವಿರ ಕನ್ನಡಿಗರು ಇದ್ದಾರೆ. ಇಸ್ರೇಲ್‌ನಲ್ಲಿ ಸೈರನ್‌ ಸದ್ದು ನಮಗೆ ಅಭ್ಯಾಸವಾಗಿದೆ. ನಾವು ಇಲ್ಲಿ ಚೆನ್ನಾಗಿ ಇದ್ದೇವೆ. ಭಾರತೀಯ (India) ಸಂಪ್ರದಾಯದಂತೆ ನಾವಿಲ್ಲಿ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಇಸ್ರೇಲ್‌ನಲ್ಲಿರುವ ಕನ್ನಡಿಗರು ಹೇಳಿದ್ದಾರೆ. ವಸಂತ್‌ ಶೆಟ್ಟಿ ಎಂಬುವವರು ಮಾತನಾಡಿ, ನಾವು ಇಲ್ಲಿ ಖುಷಿಯಾಗಿ ಇದ್ದೇವೆ. ರಜೆಯ ದಿನಗಳಲ್ಲಿ ನಾವು ಎಲ್ಲಾರೂ ಸೇರಿ ಹಬ್ಬವನ್ನು ಆಚರಿಸುತ್ತೇವೆ. ಇಲ್ಲಿನ ವ್ಯವಸ್ಥೆಗೆ ನಾವು ಹೊಂದಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು. 

ಇದನ್ನೂ ವೀಕ್ಷಿಸಿ:  ಬಿಆರ್‌ಎಸ್‌ಗೆ ಸೆಡ್ಡು ಹೊಡೆದ ಕಾಂಗ್ರೆಸ್: ಸಿ-ವೋಟರ್ ಸಮೀಕ್ಷೆಯಲ್ಲಿ 'ಕೈ'ಗೆ ಮುನ್ನಡೆ

Video Top Stories