Asianet Suvarna News Asianet Suvarna News

Asianet Exclusive: ಬಂಕರ್ ಹೊರಗೇ ಶೆಲ್ಲಿಂಗ್ ನಡೆಯುತ್ತಿತ್ತು, ಭಯವಾಗುತ್ತಿತ್ತು

ಖಾರ್ಕೀವ್‌ನಿಂದ ತಮ್ಮನ್ನು ತಾವು ರಕ್ಷಿಸಿ ಸದ್ಯ ಭಾರತೀಯ ಕೆಲ ವಿದ್ಯಾರ್ಥಿಗಳು ಪೋಲೆಂಡ್‌ ತಲುಪಿದ್ದಾರೆ. ಹೀಗಿರುವಾಗ ಯುದ್ಧಭೂಮಿಯಿಂದ ಏಷ್ಯಾನೆಟ್‌ ನ್ಯೂಸ್‌ ವರದಿಗಾರಿಕೆ ಮಾಡುತ್ತಿದ್ದು, ಅಲ್ಲಿನ ವಾಸ್ತವ ಸ್ಥಿತಿಗತಿ ಅರಿತುಕೊಳ್ಳಲು ಸಹಾಯ ಮಾಡುತ್ತಿದೆ.

First Published Mar 8, 2022, 3:53 PM IST | Last Updated Mar 8, 2022, 3:59 PM IST

ಕೀವ್(ಮಾ.08): ಖಾರ್ಕೀವ್‌ನಿಂದ ತಮ್ಮನ್ನು ತಾವು ರಕ್ಷಿಸಿ ಸದ್ಯ ಭಾರತೀಯ ಕೆಲ ವಿದ್ಯಾರ್ಥಿಗಳು ಪೋಲೆಂಡ್‌ ತಲುಪಿದ್ದಾರೆ. ಹೀಗಿರುವಾಗ ಯುದ್ಧಭೂಮಿಯಿಂದ ಏಷ್ಯಾನೆಟ್‌ ನ್ಯೂಸ್‌ ವರದಿಗಾರಿಕೆ ಮಾಡುತ್ತಿದ್ದು, ಅಲ್ಲಿನ ವಾಸ್ತವ ಸ್ಥಿತಿಗತಿ ಅರಿತುಕೊಳ್ಳಲು ಸಹಾಯ ಮಾಡುತ್ತಿದೆ.

ಸದ್ಯ ಏಷ್ಯಾನೆಟ್ ಬರದಿಗಾರ ಪ್ರಶಾಂತ್ ರಘುವಂಶಿ ಭಾರತ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದಾರೆ. ಏಷ್ಯಾನೆಟ್ ಜೊತೆ ಮಾತನಾಡಿದ ವಿದ್ಯಾರ್ಥಿಗಳು ಖಾರ್ಕೀವ್‌ನ ಪರಿಸ್ಥಿತಿ ಭಯಾನಕವಾಗಿತ್ತು. ಬಂಕರ್ ಹೊರಗೇ ಶೆಲ್ಲಿಂಗ್ ನಡೆಯುತ್ತಿತ್ತು. ನಾವು ಅಲ್ಲಿಂದ ಸುರಕ್ಷಿತವಾಗಿ ಬರುತ್ತೇವೆ ಎಂದು ಭಾವಿಸರಲಿಲ್ಲ ಎಂದಿದ್ದಾರೆ. ಇದೇ ವೇಳೆ ಭಾರತೀಯ ರಾಯಭಾರಿ ಕಚೇರಿಯ ಕಾರ್ಯವೈಖರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.