Asianet Suvarna News Asianet Suvarna News

Russia-Ukraine war: ಯುದ್ಧ ಭೂಮಿಯಿಂದ ಬಂದ ಭಾರತೀಯರು ಫುಲ್‌ ಖುಷ್‌..!

*  ಭಾರತೀಯರನ್ನ ಸುರಕ್ಷಿತವಾಗಿ ಕರೆತರಲು ಆಪರೇಷನ್‌ ಗಂಗಾ ಕಾರ್ಯಾಚರಣೆ
*  ಇಲ್ಲಿಯವರೆಗೆ ಸುಮಾರು 13000  ಜನರರು ಭಾರತಕ್ಕೆ ವಾಪಸ್‌ 
*   ತಾಯ್ನಾಡಿಗೆ ಬಂದವರ ಮುಖದಲ್ಲಿ ಮಂದಹಾಸ 

First Published Mar 6, 2022, 12:49 PM IST | Last Updated Mar 6, 2022, 12:49 PM IST

ಬೆಂಗಳೂರು(ಮಾ.06): ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನ ರಕ್ಷಿಸಿ ಕರೆತರಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 13000  ಜನರನ್ನ ಭಾರತಕ್ಕೆ ವಾಪಸ್‌ ಆಗಿದ್ದಾರೆ. ಇದರಲ್ಲಿ 366 ಕನ್ನಡಿಗರೂ ಕೂಡ ತಾಯ್ನಾಡಿಗೆ ವಾಪಸ್‌ ಬಂದಿದ್ದಾರೆ.  ಯುದ್ಧ ಪೀಡಿದ ಉಕ್ರೇನ್‌ನಿಂದ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವ ಆಪರೇಷನ್‌ ಗಂಗಾ ಕಾರ್ಯಾಚರಣೆ ನಡೆಯುತ್ತಿದೆ. ಮಾರ್ಚ್‌ 10 ರವರೆಗೆ ಆಪರೇಷನ್‌ ಗಂಗಾ ಕಾರ್ಯಾಚರಣೆ ನಡೆಯಲಿದೆ. ಇಂದೂ ಕೂಡ 11 ವಿಮಾನದ ಮೂಲಕ 2200 ಜನರು ವಾಪಸ್‌ ಭಾರತಕ್ಕೆ ಬರಲಿದ್ದಾರೆ. ಉಕ್ರೇನ್‌ನಿಂದ ನಿನ್ನೆ 3000 ಜನರು ವಾಪಸ್‌ ಬಂದಿದ್ದಾರೆ. ಇದರಲ್ಲಿ 84 ಕನ್ನಡಿಗರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಉಕ್ರೇನ್‌ನಲ್ಲಿ ತುತ್ತು ಅನ್ನಕ್ಕೂ ಪರದಾಡಿದ ಭಾರತೀಯರು ತಾಯ್ನಾಡಿಗೆ ಬಂದ ಕೂಡಲೇ ಮುಖದಲ್ಲಿ ಮಂದಹಾಸ ಮೂಡಿದೆ. 

ಯುದ್ಧಭೂಮಿಯಲ್ಲಿ Asianet News: ಪ್ರಜೆಗಳ ರಕ್ಷಿಸಲು ಆಪರೇಷನ್ ಗಂಗಾ, ಮೋದಿಗೆ ವಿದೇಶೀ ನಾಯಕರ ಮೆಚ್ಚುಗೆ!