Asianet Suvarna News Asianet Suvarna News

ಗಡಿಯಲ್ಲಿ ಚೀನಾ ಕಾಟ: ಮೋದಿ ಮುಂದಿರುವ 6 ಆಯ್ಕೆಗಳು

ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ನಿಶ್ಚಯಿಸಿದ್ದ ಸಂದರ್ಭದಲ್ಲಿ ಈ ಹೊಡೆದಾಟ ನಡೆದಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮಹಾದಂಡನಾಯಕ, ಮೂರೂ ಸೇನೆ ಮುಖ್ಯಸ್ಥರು ಸಭೆ ನಡೆಸಿದ್ದಾರೆ. 

ಬೆಂಗಳೂರು (ಜೂ. 17): ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಸೋಮವಾರ ರಾತ್ರಿ ಭೀಕರ ಕಾಳಗಕ್ಕೆ ಸಾಕ್ಷಿಯಾಗಿದೆ. ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಾಗ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆಗಳಿಂದ ತೀವ್ರ ರೀತಿಯ ದಾಳಿ ನಡೆಸಿದ್ದಾರೆ. ಈ ವೇಳೆ ಭಾರತೀಯ ಯೋಧರೂ ತಿರುಗಿ ಬಿದ್ದಿದ್ದಾರೆ. ಈ ಹೊಡೆದಾಟದಲ್ಲಿ 20 ಭಾರತೀಯ ಯೋದರು ಹುತಾತ್ಮರಾಗಿದ್ದರೆ ಚೀನಾದ 43 ಸೈನಿಕರು ಹತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. 

ಚೀನಾ ಗಡಿ ಕ್ಯಾತೆ ಶುರುವಾದದ್ದು ಎಲ್ಲಿಂದ? ಇಲ್ಲಿದೆ ಟೈಂ ಲೈನ್