Asianet Suvarna News Asianet Suvarna News

ಅಮೆರಿಕಾ ಚುನಾವಣೆ: ಭಾರತವನ್ನು 'ಕೊಳಕು' ಎಂದ ಡೊನಾಲ್ಡ್ ಟ್ರಂಪ್!

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಶುರುವಾಗಿದೆ.  ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. 

 

ಬೆಂಗಳೂರು (ಅ. 26): ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಶುರುವಾಗಿದೆ.  ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಭಾರತ ತುಂಬಾ ಗೌರವಿಸುವ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಭಾರತವನ್ನು ಕೊಳಕು ಎಂದಿದ್ದಾರೆ. ಇದು ಅನಿವಾಸಿ ಭಾರತೀಯರನ್ನು ರೊಚ್ಚಿಗೆಬ್ಬಿಸಿದೆ. 

ಅಮೆರಿಕಾ ಚುನಾವಣೆ : ಭಾರತೀಯರ ಕೈಯಲ್ಲಿ ದೊಡ್ಡಣ್ಣನ ಭವಿಷ್ಯ

ಭಾರತದಲ್ಲಿ ಶುದ್ಧ ಗಾಳಿ ಇಲ್ಲ. ಅಮೆರಿಕಾದಲ್ಲಿ ಶುದ್ಧ ಗಾಳಿಯಿದೆ. ಭಾರತೀಯರು ಒಳ್ಳೆಯ ಗಾಳಿಗಾಗಿ ಪರದಾಡುತ್ತಿದ್ದಾರೆ. ಅಮೆರಿಕಾದಲ್ಲಿ ಎಲ್ಲಿಯೇ ಹೋದರೂ ಒಳ್ಳೆಯ ಗಾಳಿ ಸಿಗುತ್ತಿದೆ.  ಅಮೆರಿಕಾಕ್ಕೆ ಹೋಲಿಸಿದರೆ ಭಾರತದ ಕೊಳಕು ದೇಶ. ಅಮೆರಿಕಾ ತುಂಬಾ ಶುದ್ಧವಾದ ದೇಶ ಎಂದು ಟ್ರಂಪ್ ಹೇಳಿದ್ದು ವಿವಾದಕ್ಕೆ ಈಡಾಗಿದೆ.