Asianet Suvarna News Asianet Suvarna News

ಕೆನಡಾದಲ್ಲಿ ಬಿಸಿಗಾಳಿ: 24 ಗಂಟೆಗಳಲ್ಲಿ 62 ಪ್ರದೇಶಗಳಲ್ಲಿ ಬೆಂಕಿ, ಮುಂದುವರೆದ ರಕ್ಷಣಾ ಕಾರ್ಯ

Jul 3, 2021, 1:12 PM IST

ವ್ಯಾಂಕೋವರ್ (ಜು. 03):  ಸುಮಾರು 49 ಡಿಗ್ರಿ ತಾಪಮಾನ, ಕಂಡು ಕೇಳರಿಯದ ಬಿಸಿಗಾಳಿ, ಅದರಿಂದ ಏಳುತ್ತಿರುವ ಅಗ್ನಿ ಜ್ವಾಲೆಗಳು ಇದೀಗ ಕೆನಡಾದ ಒಂದಿಡಿ ಊರು ಲಿಟ್ಟನ್ ಗ್ರಾಮವನ್ನು ಆಪೋಶನ ತೆಗೆದುಕೊಂಡಿದೆ. ಕಳೆದ 4 ದಿನಗಳಿಂದ ಈ ಹಳ್ಳಿಯಲ್ಲಿ 49.5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಒಂಟಿಯಾಗಿ ವಾಸಿಸುತ್ತಿರುವ ಹಲವಾರು ಜನರು ಸಾವನ್ನಪ್ಪಿರುವ ಶಂಕೆ ಇದೆ. ಜನರ ರಕ್ಷಣೆಗೆ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲಾಗುತ್ತಿದೆ.