Israel Palestin War: ಏನಿದು ಶೆಲ್ಟರ್ ರೂಮ್..? ಹೇಗಿರುತ್ತೆ ವ್ಯವಸ್ಥೆ..?
ಉಗ್ರರ ವಿರುದ್ಧ ಘೋರ ಯುದ್ಧ ಸಾರಿದೆ ಇಸ್ರೇಲ್!
ರಾಜಕೀಯ ಮರೆತು ಒಂದಾಗಿದ್ದಾರೆ ಪ್ರಭಾವಿಗಳು!
ನೆತನ್ಯಾಹುಗೆ ಭುಜಬಲ ತುಂಬಿದ ಮಾಜಿ ಪ್ರಧಾನಿ!
ಇಸ್ರೇಲ್ ರಣಭೂಮಿಯಲ್ಲಿ ಅಧಿಕಾರದಲ್ಲಿರೋ ಪಕ್ಷದವರಷ್ಟೇ ಅಲ್ಲ, ಮಾಜಿ ಪ್ರಧಾನಿ ಕೂಡ ರಣೋತ್ಸಾಹ ಪ್ರದರ್ಶನ ಮಾಡ್ತಾ ಇದಾರೆ. ಇಸ್ರೇಲಿನ(Israel) ಬಂಕರ್ ಗಳು ಪ್ರಜೆಗಳ ಜೀವ ಉಳಿಸ್ತಾ ಇದೆ. ಇಸ್ರೇಲ್ ಹಾಗೂ ಹಮಾಸ್ ಉಗ್ರರ ಮಧ್ಯೆ ಯುದ್ಧ ಶುರುವಾಗಿದೆ. ಆ ಯುದ್ಧಕ್ಕೀಗ 6ನೇ ದಿನ. ಒಂದು ವಾರದೊಳಗೆ ಗಾಜಾಪಟ್ಟಿ ಇಲ್ಲದಂತೆ ಮಾಡ್ತೀನಿ ಅಂತ ಶಪಥ ತೊಟ್ಟಿದ್ದ ಇಸ್ರೇಲ್ ಮಾತು ಸತ್ಯವಾಗುವತ್ತ ಸಾಗಿದೆ. ಉಗ್ರರಿಗೂ ಇಸ್ರೇಲಿಗೂ ನಡೀತಿರೊ ಕಾಳಗ ಕರಾಳ ರೂಪ ಪಡೀತಾ ಇದೆ. ಹಮಾಸ್(Hamas) ದಾಳಿಯಿಂದಾಗಿ ತಾನು ತನ್ನ 1500 ಮಂದಿ ಪ್ರಜೆಗಳನ್ನ ಕಳ್ಕೊಂಡಿದೀನಿ ಅಂತ ಇಸ್ರೇಲ್ ಹೇಳಿಕೆ ಕೊಟ್ಟಿದೆ. ಗಾಜಾ(Gaza) ಕೂಡ, ತನ್ನ 900 ಮಂದಿ ಪ್ರಜೆಗಳು ಸತ್ತಿದ್ದಾರೆ ಅಂತ ಹೇಳಿಕೆ ಕೊಟ್ಟಿದೆ. ಆದ್ರೆ ಇಸ್ರೇಲಿ ಸೈನಿಕರು, ನಮ್ ಹತ್ರ ಒಂದೂವರೆ ಸಾವಿರ ಹಮಾಸ್ ಉಗ್ರರ ಹೆಣ ಇದೆ ಅಂತ ಹೇಳ್ತಿದ್ದಾರೆ. ಎಲ್ಲಾ ದೇಶಗಳಲ್ಲಿರೋ ಹಾಗೆ, ಇಸ್ರೇಲ್‌ನಲ್ಲೂ ರಾಜಕಾರಣ ಇದೆ.. ಆದ್ರೆ ಅಲ್ಲಿನ ರಾಜಕಾರಣಿಗಳ ಹಾಗೆ ಬೇರೆಲ್ಲೂ ಸಿಗಲ್ಲ.. ಹಮಾಸ್ ಉಗ್ರರು ದಾಳಿ ಶುರುಮಾಡ್ತಿದ್ದ ಹಾಗೇ, ನೆತನ್ಯಾಹು, ತಾವು ಪ್ರತಿದಾಳಿ ಅಲ್ಲ-ಯುದ್ಧವನ್ನೇ ಮಾಡೋದಾಗಿ ಘೊಷಿಸಿದ್ರು. ಇಡೀ ಇಸ್ರೇಲ್ ಏಕಕಂಠದಿಂದ ರಣಘೋಷ ಮೊಳಗಿಸಿತ್ತು.. ಅಲ್ಲಿನ ಮಾಜಿ ಪ್ರಧಾನಿ ನಫ್ತಾಲಿ ಬಿನೆಟ್ ಕೂಡ ಸೇನೆಯಲ್ಲಿ ಕಾಣಿಸಿಕೊಂಡ್ರು.. ಯೋಧರ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ರು.. ದೇಶದ ರಕ್ಷಣೆಗೆ, ಉಗ್ರರ ದಂಡನೆಗೆ, ಸರ್ಕಾರ ಯಾವ ತೀರ್ಮಾನ ತಗೊಂಡ್ರೂ ನಮ್ಮ ಕಂಪ್ಲೀಟ್ ಬೆಂಬಲ ಇದೆ ಅಂತ ಘೋಷಿಸಿದ್ರು.
ಇದನ್ನೂ ವೀಕ್ಷಿಸಿ: ಏನಿದು ಡಿಕೆಶಿ Vs ಮುನಿರತ್ನ ಕುರುಕ್ಷೇತ್ರ ರಹಸ್ಯ..? "ಮುನಿರತ್ನ ಡ್ರಾಮಾ ಮಾಸ್ಟರ್" ಅಂದ್ರು ಡಿಕೆ ಬ್ರದರ್ಸ್..!