Boycott Hyundai ಹುಂಡ್ರೈ ಕಾರು ಓಡಿಸಲು ನಾಚಿಕೆ ಆಗ್ತಿದೆ, ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಕಂಪನಿಗೆ ಗ್ರಾಹಕನ ಸೆಡ್ಡು!

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹ್ಯುಂಡೈ ಕಂಪನಿಗೆ ವಿಜಯಪುರದ ಯುವಕ ಸರಿಯಾಗಿ ಸೆಡ್ಡು ಹೊಡೆದಿದ್ದಾನೆ. ಹುಂಡ್ರೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ" ಎಂದು  ರಾಷ್ಟ್ರಪ್ರೇಮಿ ಸಂತೋಷ ಚೌಧರಿ ತನ್ನ ಕಾರ್‌ಗೆ ಬೋರ್ಡ್ ಹಾಕಿದ್ದಾನೆ. ಇನ್ನು ಹುಂಡೈ ಕಾರಿನ ಲೋಗೋಗೆ ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. 

First Published Feb 13, 2022, 7:55 PM IST | Last Updated Feb 13, 2022, 7:55 PM IST

ವಿಜಯಪುರ(ಫೆ.13): ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹ್ಯುಂಡೈ ಕಂಪನಿಗೆ ವಿಜಯಪುರದ ಯುವಕ ಸರಿಯಾಗಿ ಸೆಡ್ಡು ಹೊಡೆದಿದ್ದಾನೆ. ಹುಂಡ್ರೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ" ಎಂದು  ರಾಷ್ಟ್ರಪ್ರೇಮಿ ಸಂತೋಷ ಚೌಧರಿ ತನ್ನ ಕಾರ್‌ಗೆ ಬೋರ್ಡ್ ಹಾಕಿದ್ದಾನೆ. ಇನ್ನು ಹುಂಡೈ ಕಾರಿನ ಲೋಗೋಗೆ ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. 

ತನ್ನ ಹುಂಡೈ i20 ಕಾರಿನ ಮುಂದೆ ಹಾಗೂ ಹಿಂದೆ  "I AM ASHAMED TO DRIVE THIS CAR WHICH IS AN ANTI-NATIONAL COMPANY" #JAI HIND ಎಂದು ಬೋರ್ಡ್ ಹಾಕಿದ್ದಾನೆ. ಇಷ್ಟೇ ಅಲ್ಲ ವಿಜಯಪುರದ ಗೋಳಗುಮ್ಮಟದ ಎದುರು ಸಾರ್ವಜನಿಕರ‌ ಪ್ರದರ್ಶನಕ್ಕೆ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕಾಶ್ಮೀರ ಪ್ರತ್ಯೇಕತ ವಾದಿಗಳನ್ನು ಬೆಂಬಲಿಸಿ ಪಾಕಿಸ್ತಾನ ಹ್ಯುಂಡೈ ಟ್ವೀಟ್ ಮಾಡಿತ್ತು. ಇದನ್ನು ಪ್ರಶ್ನಿಸಿದ ಭಾರತೀಯರ ಟ್ವಿಟರ್ ಖಾತೆಗಳನ್ನು ಹ್ಯುಂಡೈ ಇಂಡಿಯಾ ಬ್ಲಾಕ್ ಮಾಡಿತ್ತು. ಬಳಿಕ ಬಾಯ್‌ಕಾಟ್ ಇಂಡಿಯಾ ಅಭಿಯಾನ ಆರಂಭಿಸಲಾಗಿತ್ತು.