Asianet Suvarna News Asianet Suvarna News

ಸುಳ್ಯದಲ್ಲಿ ಚಲಿಸುತ್ತಿರುವ ಲಾರಿ ಅಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ವಿಡಿಯೋ

  • ಸ್ಪೀಡಾಗಿ ಚಲಿಸುತ್ತಿದ್ದ ಲಾರಿ ಅಡಿಗೆ ಹಾರಿದ ಯುವಕ
  • ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
  • ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರದಲ್ಲಿ ಘಟನೆ

ಸ್ಪೀಡಾಗಿ ಚಲಿಸುತ್ತಿದ್ದ ಲಾರಿ ಚಕ್ರದಡಿಗೆ ಸಿಲುಕಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದಲ್ಲಿ ನಡೆದಿದೆ. ನೀರಿಗೆ ಡೈವ್‌ ಹೊಡೆಯುವ ಹಾಗೆ ಯುವಕ ಸ್ಪೀಡ್ ಆಗಿ ಬರುತ್ತಿದ್ದ ಲಾರಿ ಅಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರು ಬೆಚ್ಚಿ ಬಿದ್ದಿದ್ದಾರೆ. ಘಟನೆಯ ನಂತರ ಯುವಕನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.