Asianet Suvarna News Asianet Suvarna News

ಬೆಕ್ಕು ನಾಯಿ ಅಲ್ಲ, 200ಕ್ಕೂ ಹೆಚ್ಚು ಮೊಸಳೆ ಸಾಕುವ ವ್ಯಕ್ತಿ: ವಿಡಿಯೋ

  • 200ಕ್ಕೂ ಹೆಚ್ಚು ಮೊಸಳೆ ಸಾಕುವ ಯುವಕ
  • ಕೋಲು ಹಿಡಿದರೆ ಮೊಸಳೆಗಳೆಲ್ಲ ಸೈಲೆಂಟ್
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾನ್ಯವಾಗಿ ನಾವು ಬೆಕ್ಕು ನಾಯಿಗಳನ್ನು ಸಾಕಿ ಪ್ರೀತಿಯಿಂದ ಅವುಗಳೊಡನೆ ಒಡನಾಡುವುದು ಸಾಮಾನ್ಯ ಏಕೆಂದರೆ ಅವುಗಳು ಕ್ರೂರ ಪ್ರಾಣಿಗಳಲ್ಲ ಹಾಗೂ ಮನುಷ್ಯರ ಜೊತೆ ತುಂಬಾ ಪ್ರೀತಿಯಿಂದ ಇರುತ್ತವೆ ಎಂಬುದು. ಆದರೆ ಇಲ್ಲೊಬ್ಬ ಹೆಸರು ಕೇಳಿದರೆ ಭಯ ಪಡುವ ಮೊಸಳೆಗಳನ್ನು ಸಾಕುತ್ತಿದ್ದಾನೆ. ಅದೂ ಬರೀ ಒಂದೆರಡಲ್ಲ. ಬರೋಬರಿ 200ಕ್ಕೂ ಹೆಚ್ಚು ಮೊಸಳೆಗಳನ್ನು ಈತ ಸಾಕುತ್ತಿದ್ದು, ಅವುಗಳನ್ನು ಮಕ್ಕಳನ್ನು ನಿರ್ವಹಿಸುವ ಹೆಡ್‌ ಮಾಸ್ಟರ್‌ನಂತೆ ನಿರ್ವಹಿಸುತ್ತಾನೆ. ಈತ ಕೋಲು ಹಿಡಿದನೆಂದರೆ ಮೊಸಳೆಗಳೆಲ್ಲವೂ ಸೈಲೆಂಟ್‌ ಆಗುತ್ತವೆ. ಈ ವಿಚಿತ್ರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೆಚ್ಚಿ ಬೀಳುತ್ತಿದ್ದಾರೆ.

Video Top Stories