ಜಗ್ಗಪ್ಪ ಜೊತೆ ಸುಷ್ಮಿತಾ ಮದುವೆಯಂತೆ ಹೌದಾ?

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಅನೇಕ ಸ್ಪರ್ಧಿಗಳು ಕಾಮಿಡಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸೃಜನ್ ಲೋಕೇಶ್ ಜಾಗಕ್ಕೆ ಸಾಧು ಕೋಕಿಲಾ  ಎಂಟ್ರಿ ಕೊಟ್ಟಿದ್ದಾರೆ. ಶ್ರುತಿ ಮತ್ತೋರ್ವ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

First Published Jun 22, 2022, 5:09 PM IST | Last Updated Jun 22, 2022, 5:09 PM IST

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಅನೇಕ ಸ್ಪರ್ಧಿಗಳು ಕಾಮಿಡಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸೃಜನ್ ಲೋಕೇಶ್ ಜಾಗಕ್ಕೆ ಸಾಧು ಕೋಕಿಲಾ  ಎಂಟ್ರಿ ಕೊಟ್ಟಿದ್ದಾರೆ. ಶ್ರುತಿ ಮತ್ತೋರ್ವ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಶೋ ಸ್ಪರ್ಧಿಗಯಾಗಿರುವ ಸುಷ್ಮಿತಾ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಮದುಮಗಳ ಹಾಗೆ ರೆಡಿಯಿಗಾರುವ ಸುಷ್ಮಿತಾ  ಸ್ಕಿಟ್ ಬಟ್ಟೆ ಮಾಹಿತಿ ಹಂಚಿಕೊಂಡರು. ಜೊತೆಗೆ ಜಗ್ಗಪ್ಪ ಜೊತೆ ಮದುವೆ ಸುದ್ದಿ ಬಗ್ಗೆ ಸ್ಪ,ಷ್ಟನೆ ನೀಡಿದರು. ಮೊದಲಿನಿಂದನೂ ಜಗ್ಗಪ್ಪ ಮತ್ತು ನಾನು ಜೋಡಿಯಾಗಿ ಮಾಡುತ್ತಿದ್ದೇವೆ ಹಾಗಾಗಿ ಎಲ್ಲರಿಗೂ ಹಾಗೆ ಅನಿಸುತ್ತಿದೆ ಎಂದು ಹೇಳಿದರು. ರಚಿತಾ ರಾಮ್ ಬಗ್ಗೆಯೂ ಮಾತನಾಡಿ ನಮ್ಮಿಬ್ಬರನ್ನು ಒಂದು ಮಾಡಲು ತುಂಬಾ ಪ್ರಯತ್ನ ಮಾಡಿದರು ಎಂದು ರಿವೀಲ್ ಮಾಡಿದರು.