17 ವರ್ಷದಲ್ಲಿ ಶೇ. 2031 ರಷ್ಟು ಅಕ್ರಮ ಆಸ್ತಿ ಗಳಿಕೆ, ಜಮೀರ್‌ಗೆ ಮುಳುವಾದ ಐಷಾರಾಮಿ ಮನೆ
ಅಕ್ರಮ ಆಸ್ತಿ ಪ್ರಕರಣ ಸಂಬಂಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಎಸಿಬಿ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಬೆಂಗಳೂರು (ಆ. 07): ಅಕ್ರಮ ಆಸ್ತಿ ಪ್ರಕರಣ ಸಂಬಂಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಎಸಿಬಿ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಈದ್ಗಾ ವಿವಾದ: ಮೈದಾನದಲ್ಲಿರುವ ಈದ್ಗಾ ವಾಲ್ ತೆರವಿಗೆ ಹಿಂದೂ ಸಂಘಟನೆಗಳ ಆಗ್ರಹ
ಇತ್ತೀಚೆಗೆ ಇ.ಡಿ. ವರದಿ ಆಧರಿಸಿ ಎಸಿಬಿ, ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಶಾಸಕ ಜಮೀರ್ ಅವರ ಕಟ್ಟಿಸಿರುವ ವೈಭವೋಪೇತ ಮನೆ ವಿಚಾರವಾಗಿ ಎಸಿಬಿ ಮಾಹಿತಿ ಕೇಳಿತ್ತು. ಈ ಮನೆಗೆ 80 ರು.ಗೂ ಕೋಟಿ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ ಎಂದು ಇ.ಡಿ. ಸಹ ವರದಿ ನೀಡಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿರುವ ಜಮೀರ್, ಮನೆಗೆ ವ್ಯಯಿಸಲಾಗಿರುವ ಹಣಕಾಸಿನ ಕುರಿತು ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ವಿದೇಶದಿಂದ ಪೀಠೋಪಕರಣ ಹಾಗೂ ಮಾರ್ಬಲ್ ಕಲ್ಲಿನ ವೆಚ್ಚದ ಬಗ್ಗೆ ದಾಖಲೆ ಸಲ್ಲಿಸಲು ಅವರು ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ.