Asianet Suvarna News Asianet Suvarna News

ಒಂದು ವೇಳೆ ಅಕ್ರಮ ಆಸ್ತಿ ಗಳಿಕೆ ಸಾಬೀತಾದ್ರೆ ಡಿಕೆಶಿಗೆ ಯಾವ ರೀತಿ ಶಿಕ್ಷೆಯಾಗುತ್ತದೆ?

ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಯಡಿ ಕೇಸ್ ಹಾಕಲಾಗಿದೆ. ಸಿಬಿಐ ವಿಚಾರಣೆಯನ್ನೂ ನಡೆಸುತ್ತಿದೆ. ಈ ಕೇಸ್‌ ಯಾವ ಮಾದರಿಯಲ್ಲಿ ವಿಚಾರಣೆ ನಡೆಯುತ್ತದೆ ಎಂಬ ಚರ್ಚೆ ಶುರುವಾಗಿದೆ. 

ಬೆಂಗಳೂರು (ಅ. 06): ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಯಡಿ ಕೇಸ್ ಹಾಕಲಾಗಿದೆ. ಸಿಬಿಐ ವಿಚಾರಣೆಯನ್ನೂ ನಡೆಸುತ್ತಿದೆ. ಈ ಕೇಸ್‌ ಯಾವ ಮಾದರಿಯಲ್ಲಿ ವಿಚಾರಣೆ ನಡೆಯುತ್ತದೆ ಎಂಬ ಚರ್ಚೆ ಶುರುವಾಗಿದೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಕೇಸ್ ಮಾದರಿಯಲ್ಲಿ ತನಿಖೆಯಾದರೆ ಡಿಕೆಶಿಗೆ ಸಂಕಷ್ಟ ತಪ್ಪಿದ್ದಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಬಗ್ಗೆಯೂ ಲೆಕ್ಕ ಕೇಳುತ್ತಾರೆ. 1989 ರಲ್ಲಿ ಎಂಎಲ್‌ಎ ಆದಾಗಿನಿಂದ ಹಿಡಿದು ಈವರೆಗೂ ತನಿಖೆ ನಡೆಯುತ್ತದೆ. ತನಿಖೆಗೆ ಸಿಬಿಐ ಸಂಪೂರ್ಣ ಸಿದ್ಧವಾಗಿದೆ.

ಆದಾಯ ಮೀರಿ ಆಸ್ತಿ ಗಳಿಕೆ: ಸಿಬಿಐ ಈ ಮಾದರಿಯಲ್ಲಿ ತನಿಖೆ ಮಾಡಿದರೆ ಡಿಕೆಶಿಗೆ ಜೈಲು ಪಕ್ಕಾ? 

ಇಡೀ ಪ್ರಕರಣ ಯಾವ ರೀತಿ ಸಾಗಬಹುದು? ತನಿಖೆ ಯಾವ ರೀತಿ ಸಾಗಬಹುದು? ಯಾವ ರೀತಿ ಡಿಕೆಶಿ ಸಮರ್ಥನೆ ಕೊಡುವ ಸಾಧ್ಯತೆ ಇದೆ? ಸಿಬಿಐ ಯಾವೆಲ್ಲಾ ರೀತಿ ಪ್ರಶ್ನೆ ಕೇಳಬಹುದು? ಎಂಬ ಬಗ್ಗೆ ವಕೀಲರಾದ ವೇಣುಗೊಪಾಲ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.