Asianet Suvarna News Asianet Suvarna News

ಆದಾಯ ಮೀರಿ ಆಸ್ತಿ ಗಳಿಕೆ: ಸಿಬಿಐ ಈ ಮಾದರಿಯಲ್ಲಿ ತನಿಖೆ ಮಾಡಿದ್ರೆ ಡಿಕೆಶಿಗೆ ಜೈಲು ಪಕ್ಕಾ?

ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಯಡಿ ಕೇಸ್ ಹಾಕಲಾಗಿದೆ. ಸಿಬಿಐ ವಿಚಾರಣೆಯನ್ನೂ ನಡೆಸುತ್ತಿದೆ. ಈ ಕೇಸ್‌ ಯಾವ ಮಾದರಿಯಲ್ಲಿ ವಿಚಾರಣೆ ನಡೆಯುತ್ತದೆ ಎಂಬ ಚರ್ಚೆ ಶುರುವಾಗಿದೆ. 

ಬೆಂಗಳೂರು (ಅ. 06): ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಯಡಿ ಕೇಸ್ ಹಾಕಲಾಗಿದೆ. ಸಿಬಿಐ ವಿಚಾರಣೆಯನ್ನೂ ನಡೆಸುತ್ತಿದೆ. ಈ ಕೇಸ್‌ ಯಾವ ಮಾದರಿಯಲ್ಲಿ ವಿಚಾರಣೆ ನಡೆಯುತ್ತದೆ ಎಂಬ ಚರ್ಚೆ ಶುರುವಾಗಿದೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಕೇಸ್ ಮಾದರಿಯಲ್ಲಿ ತನಿಖೆಯಾದರೆ ಡಿಕೆಶಿಗೆ ಸಂಕಷ್ಟ ತಪ್ಪಿದ್ದಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಬಗ್ಗೆಯೂ ಲೆಕ್ಕ ಕೇಳುತ್ತಾರೆ. 1989 ರಲ್ಲಿ ಎಂಎಲ್‌ಎ ಆದಾಗಿನಿಂದ ಹಿಡಿದು ಈವರೆಗೂ ತನಿಖೆ ನಡೆಯುತ್ತದೆ. ತನಿಖೆಗೆ ಸಿಬಿಐ ಸಂಪೂರ್ಣ ಸಿದ್ಧವಾಗಿದೆ. 

ಮತ್ತೆ ಅರೆಸ್ಟ್‌ ಅದ್ರೆ ಡಿಕೆಶಿಗೆ ಲಾಭನಾ? ನಷ್ಟನಾ?

ಜಲಸಂಪನ್ಮೂಲ ಸಚಿವರಾಗಿದ್ದಾಗ ನಡೆದ ವ್ಯವಹಾರಗಳೇನು? ರಿಯಲ್‌ ಎಸ್ಟೇಟ್‌ನಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಮನೆಯ ಯಾರ್ಯಾರ ಹೆಸರಿನಲ್ಲಿ ಎಲ್ಲೆಲ್ಲಿ ಆಸ್ತಿಗಳಿವೆ? ಒಡವೆಗಳು ಎಷ್ಟಿವೆ? ಎಂಬುದರ ಬಗ್ಗೆ ಪಿನ್ ಟು ಪಿನ್ ಡಿಟೇಲ್ಸ್ ಕಲೆ ಹಾಕುತ್ತಿದೆ ಸಿಬಿಐ. ಇಲ್ಲಿ ಜಯಲಲಿತಾ ಮಾದರಿಯಲ್ಲಿ ತನಿಖೆ ನಡೆದರೆ ಡಿಕೆಶಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

Video Top Stories