ಕೊರೊನಾ ಬಗ್ಗೆ ಇರಲಿ ಗಮನ :2 ನೇ ಬಾರಿ ಸೋಂಕು ಬಂದ್ರೆ ಅಪಾಯ

ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ ಎಂದು ಮೈಮರೆಯುವುದು ಸರಿಯಲ್ಲ. ಈಗಾಗಲೇ ಕೇರಳ, ದೆಹಲಿಯಲ್ಲಿ 2 ನೇ ಅಲೆ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿಯೂ 2 ನೇ ಅಲೆಯ ಆತಂಕ ಶುರುವಾಗಿದೆ. 

First Published Nov 6, 2020, 12:49 PM IST | Last Updated Nov 6, 2020, 12:50 PM IST

ಬೆಂಗಳೂರು (ನ. 06): ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ ಎಂದು ಮೈಮರೆಯುವುದು ಸರಿಯಲ್ಲ. ಈಗಾಗಲೇ ಕೇರಳ, ದೆಹಲಿಯಲ್ಲಿ 2 ನೇ ಅಲೆ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿಯೂ 2 ನೇ ಅಲೆಯ ಆತಂಕ ಶುರುವಾಗಿದೆ. 

ಕರ್ನಾಟಕದಲ್ಲಿ ಕೋವಿಡ್ 2 ನೇ ಅಲೆಯ ಆತಂಕ?

ಮೊದಲ ಬಾರಿ ತೀವ್ರ ಕೊರೋನಾ ಲಕ್ಷಣಗಳೊಂದಿಗೆ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ಬಂದರೆ ಅದರ ತೀವ್ರತೆ ಕಡಿಮೆಯಿರುತ್ತದೆ. ಆದರೆ, ಮೊದಲು ಕಡಿಮೆ ಲಕ್ಷಣಗಳಿಂದ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ತಗಲಿದರೆ ಪರಿಣಾಮಗಳ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿಗಳು ಹೇಳಿವೆಯೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.