Asianet Suvarna News Asianet Suvarna News

Covid-19 Rules : ಮಾಸ್ಕ್ ಇಲ್ಲದೆ ಸಮಾರಂಭದಲ್ಲಿ ಭಾಗಿಯಾದ ಬಿಜೆಪಿ ಶಾಸಕ, ಸಂಸದ!

ನಾಯಕರಿಗೊಂದು ಕಾನೂನು, ಜನರಿಗೊಂದು ಕಾನೂನು
ಬಿಜೆಪಿ ನಾಯಕರಿಂದಲೇ ಕೋವಿಡ್-19 ನಿಯಮಗಳ ಬ್ರೇಕ್
ಗೋಕರ್ಣದಲ್ಲಿ ನಡೆದ ಸಮಾರಂಭದಲ್ಲಿ ಮಾಸ್ಕ್ ಇಲ್ಲದೆ ಆಗಮಿಸಿದ ಜನನಾಯಕರು

ಕಾರವಾರ (ಜ. 19): ದೇಶದಲ್ಲಿ ಕೋವಿಡ್ ಪ್ರಕರಣಗಳ ಆತಂಕ ಇನ್ನೂ ಕಡಿಮೆಯಾಗಿಲ್ಲ. ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದೇವೆ ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ರದ್ದು ಮಾಡಿ ಎನ್ನುವ ಮನವಿಗಳೂ ರಾಜ್ಯದ ಉದ್ಯಮ ವರ್ಗದಿಂದ ಬಂದಿದೆ. ಇವೆಲ್ಲದರ ನಡುವೆ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರುವ ಪ್ರಕರಣಗಳು ಸಾಕಷ್ಟು ಕಂಡುಬಂದಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರು, ಸಂಸದರಿಂದಲೇ ಸಾಕಷ್ಟು ಬಾರಿ ಕೋವಿಡ್ ನಿಯಮಗಳ ಉಲ್ಲಂಘೆಯಾಗಿದೆ.

Covid Rules Violation: ಮಾಸ್ಕ್ ಹಾಕದೇ ಕಾರ್ಯಕ್ರಮದಲ್ಲಿ ಭಾಗಿಯಾದ ಶ್ರೀಮಂತ ಪಾಟೀಲ್
ಗೋಕರ್ಣದ ಗಂಗೆಕೊಳ್ಳದಲ್ಲಿ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ದಿನಕರ್ ಶೆಟ್ಟಿ ಹಾಗೂ ಸಂಸದ ಅನಂತ ಕುಮಾರ್ ಹೆಗಡೆ ಮಾಸ್ಕ್ ಹಾಕಿಕೊಳ್ಳದೆ ಇರುವ ಮೂಲಕ ಕೋವಿಡ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಅದಲ್ಲದೆ, ಸಾಮಾಜಿಕ ಅಂತರವೂ ಇಲ್ಲದೆ ಪಾಲ್ಗೊಳ್ಳುವ ಮೂಲಕ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ..