Asianet Suvarna News Asianet Suvarna News

Lockdown In Karnataka: ಒಮಿಕ್ರೋನ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಮಿನಿ ಲಾಕ್‌ಡೌನ್ ?

ಒಮಿಕ್ರೋನ್ ದೇಶದೊಳಗೂ ವೇಗವಾಗಿ ಹರಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೈಟ್‌ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮವಾಗಿ ಏನು ಮಾಡಲಾಗುತ್ತದೆ ? ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಹೇರುತ್ತಾರಾ ?

First Published Dec 26, 2021, 1:20 PM IST | Last Updated Dec 26, 2021, 1:23 PM IST

ಒಮಿಕ್ರೋನ್ ದೇಶದೊಳಗೂ ವೇಗವಾಗಿ ಹರಡುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ನೈಟ್‌ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಮುಂಜಾಗೃತಾ ಕ್ರಮವಾಗಿ ಏನು ಮಾಡಲಾಗುತ್ತದೆ ? ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ಹೇರುತ್ತಾರಾ ? ಅನೇಕ ರಾಜ್ಯಗಳಲ್ಲಿ ಈಗಾಗಲೇ ಟಫ್ ರೂಲ್ಸ್ ತರಲಾಗಿದ್ದು ರಾಜ್ಯದಲ್ಲೂ ಮಿನಿ ಲಾಕ್‌ಡೌನ್ ಮಾಡುವ ಸೂಚನೆ ಕಾಣಸಿಗುತ್ತಿದೆ.

ಕರುನಾಡಿಗೆ ಶಾಕ್‌ ಮೇಲೆ ಶಾಕ್‌ ಕೊಡ್ತಿದೆ ಒಮಿಕ್ರೋನ್‌: ಆತಂಕದಲ್ಲಿ ಜನತೆ

ಈಗಾಗಲೇ ಒಮಿಕ್ರೋನ್ ಹರಡುತ್ತಿದೆ. ಕೊರೋನಾಗಿಂತ 5 ಪಟ್ಟು ವೇಗದಲ್ಲಿ ಹರಡುವ ಒಮಿಕ್ರೋನ್ ಈಗಾಗಲೇ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಹೆಜ್ಜೆ ಇಟ್ಟಾಗಿದೆ. ಭಾರತದಲ್ಲಿ ಕೇಸ್ 10 ಲಕ್ಷಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ತಡೆಯುವುದಕ್ಕೂ ಇನ್ನು 1 ತಿಂಗಳ ಅವಕಾಶ ಕೂಡಾ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಒಮಿಕ್ರೋನ್ ದೇಶಕ್ಕೆ ಕಾಲಿಡದಂತೆ ತಡೆಯಲು ಬಹಳಷ್ಟು ಪ್ರಯತ್ನಪಟ್ಟರೂ ಇದರಲ್ಲಿ ಯಾವ ದೇಶವೂ ಸಕ್ಸಸ್ ಆಗಿಲ್ಲ ಎನ್ನುವುದು ದುರದೃಷ್ಟಕರ.