Asianet Suvarna News Asianet Suvarna News

ಸುದ್ದಿ ಮಾಡಿ, ಬುದ್ದಿ ಹೇಳಿದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ..!

ಬೆಂಗಳೂರಿನಲ್ಲಿ ಮೊದಲೇ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಬದಲು ರಸ್ತೆಯ ಬದಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಗಾಳಿ ಬಂದರೆ ಪಿಪಿಇ ಕಿಟ್ ಗಳು ರಸ್ತೆಗೆ ಬಂದು ಬೀಳುತ್ತವೆ. 

ಬೆಂಗಳೂರು(ಜು.11): ಕೆ.ಆರ್ ಪುರಂ ಬಳಿ ರಸ್ತೆಯುದ್ಧಕ್ಕೂ ಪಿಪಿಇ ಕಿಟ್ ಬಿಸಾಕಿ ಬೇಜವಾಬ್ದಾರಿ ಮೆರೆಯಲಾಗಿತ್ತು. ಈ ಕುರಿತಂತೆ ಸುವರ್ಣ ನ್ಯೂಸ್‌ ಶುಕ್ರವಾರ ಸಂಜೆ 5 ಗಂಟೆಗೆ ವಿಸ್ತ್ರೃತ ವರದಿ ಪ್ರಸಾರ ಮಾಡುವ ಮೂಲಕ ಬಿಬಿಎಂಪಿ ಗಮನ ಸೆಳೆದಿತ್ತು. 

ಬೆಂಗಳೂರಿನಲ್ಲಿ ಮೊದಲೇ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಬದಲು ರಸ್ತೆಯ ಬದಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಗಾಳಿ ಬಂದರೆ ಪಿಪಿಇ ಕಿಟ್ ಗಳು ರಸ್ತೆಗೆ ಬಂದು ಬೀಳುತ್ತವೆ. 

ಕಾಲಿನಲ್ಲೇ ಸಚಿವ ಸುರೇಶ್‌ ಕುಮಾರ್‌ ಹೆಸರು ಬರೆದ ಕೌಶಿಕ್‌ಗೆ ಪ್ರಶಂಸೆ

ಜೂನ್ 10ರ ಸಂಜೆ ವರದಿ ಪ್ರಸಾರ ಮಾಡಿದ ಬಳಿಕ ಸುದ್ದಿಯನ್ನು ಸುವರ್ಣ ನ್ಯೂಸ್ ತಡರಾತ್ರಿ ಫಾಲೋ ಅಪ್ ಮಾಡಿದೆ. ಆದರೆ ಬಿಬಿಎಂಪಿ ಮಾತ್ರ ನಿದ್ರೆಯಿಂದ ಎಚ್ಚೆತ್ತುಕೊಂಡಿಲ್ಲ. ರಸ್ತೆಯಲ್ಲಿ ಓಡಾಡುವ ಜನರಿಗೀಗ ಕೊರೋನಾ ಸೋಂಕು ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.