Asianet Suvarna News Asianet Suvarna News

ಪ್ರಜ್ವಲ್ ರೇವಣ್ಣನ ವಿದೇಶಕ್ಕೆ ಕಳುಹಿಸಿದ್ದೇ ದೇವೇಗೌಡರು, ಸಿದ್ದರಾಮಯ್ಯ ತಿರುಗೇಟು!

ದೇವೇಗೌಡರೆ ಪ್ರಜ್ವಲ್ ರೇವಣ್ಣನ ವಿದೇಶಕ್ಕೆ ಕಳುಹಿಸಿ ಇದೀಗ ಪತ್ರ ಬರೆದಿದ್ದಾರೆ, ಸಿದ್ದರಾಮಯ್ಯ ತಿರುಗೇಟು, ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಶುರು, ಭಾರತದ ವ್ಯವಸ್ಥೆ ಕೆಳಸಮುದಾಯದ ವಿರುದ್ಧವಿದೆ, ಎಡವಟ್ಟು ಮಾಡಿಕೊಂಡ್ರಾ ರಾಹುಲ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಪ್ರಜ್ವಲ್ ರೇವಣ್ಣ ತಕ್ಷಣವೇ ಭಾರತಕ್ಕೆ ಬಂದು ಪೊಲೀಸರಿಗೆ ಶರಣವಾಗಬೇಕು. ಇದು ಮನವಿಯಲ್ಲ, ನನ್ನ ಎಚ್ಚರಿಕೆ ಎಂದು ಮಾಜಿ ಪ್ರಧಾನಿ ದೇವೇಗೌಡರು ವಾರ್ನಿಂಗ್ ನೀಡಿದ್ದಾರೆ. ಆದರೆ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದೇ ದೇವೇಗೌಡರು, ಇದೀಗ ಪತ್ರ ಬರೆಯುವ ನಾಟಕವಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡಲು ರಾಜ್ಯ ಪೊಲೀಸರು, ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.