Asianet Suvarna News Asianet Suvarna News

'ಎಚ್‌ಡಿಕೆ ಬಾಯಿ ಬಿಟ್ರೆ ಬರೀ ಸುಳ್ಳುಗಳನ್ನೇ ಹೇಳ್ತಾರೆ. ಅಲ್ಪಸಂಖ್ಯಾತರ ನರಮೇಧ ಸುಳ್ಳು ರೀ'

Oct 18, 2021, 10:32 AM IST

ಬೆಂಗಳೂರು (ಅ. 18): ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಇಂದು ಹಾನಗಲ್‌ನಲ್ಲಿ ಸಿದ್ದರಾಮಯ್ಯ (Siddaramaiah) ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್ ವಿರುದ್ಧ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. 

RSS ನಿಂದ ದೇಶ, ಸಮಾಜ, ವಿಭಜನೆ: ಸಿದ್ದರಾಮಯ್ಯ ವಾಗ್ದಾಳಿ

'ಎಚ್‌ಡಿಕೆ ಬಾಯಿ ಬಿಟ್ರೆ ಬರೀ ಸುಳ್ಳುಗಳನ್ನೇ ಹೇಳ್ತಾರೆ. ಅಲ್ಪಸಮಖ್ಯಾತರ ನರಮೇಧ ಸುಳ್ಳು ರೀ, ಅವರು ಹೇಳೋದೆಲ್ಲಾ ಸುಳ್ಳು. ಅವರ ಆರೋಪಗಳಿಗೆ ನಮ್ಮ ಪಕ್ಷದ ನಾಯಕರು ಉತ್ತರ ಕೊಡುತ್ತಾರೆ. ಅವರ ಸುಳ್ಳುಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ' ಎಂದಿದ್ದಾರೆ.