Asianet Suvarna News Asianet Suvarna News

ನಟ ದರ್ಶನ್ ಗ್ಯಾಂಗ್ ಸೇರಿದ ಮಗ ಅರೆಸ್ಟ್ , ಹೃದಯಾಘಾತದಿಂದ ತಂದೆ ನಿಧನ!

ದರ್ಶನ್ ಅರೆಸ್ಟ್ ಮಾಡದಂತೆ ಬಂದಿತ್ತು ಒತ್ತಡ, ಕ್ರೌರ್ಯದ ಭೀಕರತೆ ಬಿಚ್ಚಿಟ್ಟ ಪೊಲೀಸ್, ಕಟುಕರ ಡಿಗ್ಯಾಂಗ್ ಜೊತೆ ಸೇರಿಕೊಂಡ ಅನುಕುಮಾರ್ ಇದೀಗ ಜೈಲು ಸೇರಿದ್ದಾನೆ. ಇತ್ತ ಇದೇ ನೋವಿನಲ್ಲಿ ಆರೋಪಿ ತಂದೆ ಮೃತಪಟ್ಟಿದ್ದಾರೆ. ದರ್ಶನ್ ಪ್ರಕರಣದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ನಟ ದರ್ಶನ್ ಗ್ಯಾಂಗ್ ಬಡಪಾಯಿ ರೇಣುಕಾಸ್ವಾಮಿ ಮೇಲೆ ಕೌರ್ಯ ಮೆರೆದು ಹತ್ಯೆ ಮಾಡಲಾಗಿದೆ. ಈ ಕಟುಕರ ಡಿಗ್ಯಾಂಗ್ ಜೊತೆ ಸೇರಿಕೊಂಡ ಅನುಕುಮಾರ್ ಇದೀಗ ಜೈಲು ಸೇರಿದ್ದಾನೆ. ಈ ನೋವಿನಲ್ಲೇ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನೇ ಈ ರೀತಿಯ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ. ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದ ಅನು ಕುಮಾರ್ ತಂದೆ ನೋವಿನಲ್ಲೇ ಮೃತಪಟ್ಟಿದ್ದಾರೆ. ಇತ್ತ ನಟ ದರ್ಶನ್ ಡಿ ಗ್ಯಾಂಗ್ ನಡೆಸಿದ ಕೊಲೆ ಘಟನೆಯ ಭೀಕರತೆಯನ್ನು ಪೊಲೀಸ್ ಬಹಿರಂಗಪಡಿಸಿದ್ದಾರೆ. ಕೋಳಿಯನ್ನು ಎತ್ತಿ ಗೋಡೆಗೆ ಹೊಡೆದಂತೆ ಚಿಕ್ಕ ಹುಡುಗನ ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸ್ ಹೇಳಿದ್ದಾರೆ. ಪೊಲೀಸರ ಮಾತುಗಳಲ್ಲಿ ದರ್ಶನ್ ಕರಾಳ ಮುಖ ಬಟಾ ಬಯಲಾಗಿದೆ. 
 

Video Top Stories