Asianet Suvarna News Asianet Suvarna News

ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಚಿಕ್ಕಣ್ಣ, ಆಪ್ತರಿಗೆಲ್ಲಾ ಸಂಕಷ್ಟ!

ನಟ ದರ್ಶನ್ ಆಪ್ತರಿಗೆ ಸಂಕಷ್ಟ, ನಟ ಚಿಕ್ಕಣ ಕರೆಯಿಸಿಕೊಂಡು ರೆಸ್ಟೋರೆಂಟ್‌ನಲ್ಲಿ ಸ್ಥಳ ಮಹಜರು, ದರ್ಶನ್ ಪ್ರಕರಣದಲ್ಲಿ ಕರೆಂಟ್ ಶಾಕ್ ಕೊಟ್ಟಿದ್ದ ರಾಜು ಬಿಚಿಟ್ಟ ಸ್ಫೋಟಕ ಮಾಹಿತಿ, ಕೊಲೆ ಬಳಿಕ ರೇಣುಕಾಸ್ವಾಮಿ ಮೈಮೇಲಿದ್ದ ಒಡವೆಗಳು ಆರೋಪಿ ಮನೆಯಲ್ಲಿ ಪತ್ತೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 
 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಹಲವರಿಗೆ ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣ ಸಂಬಂಧ ಇದೀಗ ಹಾಸ್ಯ ನಟ ಚಿಕ್ಕಣ್ಣ ಕರೆಯಿಸಿ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ಕರೆಯಿಸಿ ಸ್ಥಳ ಮಹಜರು ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರಾಜು ಬಂಧಿಸಿದ ಪೊಲೀಸರು ಆತನಿಂದ ಮೆಗ್ಗರ್ ಮಶಿನ್ ವಶಕ್ಕೆ ಪಡೆದಿದ್ದಾರೆ. ಈ ಮೆಗ್ಗರ್ ಮಶೀನ್ ಬಳಸಿ ರೇಣುಕಾಸ್ವಾಮಿಗೂ ಮೊದಲು ಯಾರಿಗಾದರೂ ಶಾಕ್ ಕೊಡಲಾಗಿತ್ತೇ? ಎಂದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.