Asianet Suvarna News Asianet Suvarna News

ಸೀಡಿ ಕೇಸ್‌ಗೆ ಡಿ ಸುಧಾಕರ್ ಎಂಟ್ರಿ, ಗೂಗಲ್ ಪೇ, 35 ಫೋನ್ ಕಾಲ್, 6 ತಿಂಗಳ ಅಕಟಕಟಾ!

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ ಮಾಜಿ ಸಚಿವ ಡಿ.ಸುಧಾಕರ್‌ ಹೆಸರು ಕೇಳಿ ಬಂದಿದೆ. 

ಬೆಂಗಳೂರು (ಏ. 05): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ ಮಾಜಿ ಸಚಿವ ಡಿ.ಸುಧಾಕರ್‌ ಹೆಸರು ಕೇಳಿ ಬಂದಿದೆ. 

ಸುಧಾಕರ್ ಅವರು 35 ಬಾರಿ ಯುವತಿಗೆ ಕರೆ ಮಾಡಿ ಮಾತನಾಡಿದ್ದಾರೆ. 6 ತಿಂಗಳುಗಳಿಂದ ಇಬ್ಬರಿಗೂ ಸಂಪರ್ಕವಿದೆ. ಹಣದ ವ್ಯವಹಾರವೂ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.  ನನಗೆ ಸಿ.ಡಿ. ಸಂತ್ರಸ್ತೆಯ ಪರಿಚಯವಿಲ್ಲ. ನಾನು ಯಾರಿಗೂ ಬಿಡಿಗಾಸನ್ನೂ ಕೊಟ್ಟಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ನಿರಾಧಾರವಾಗಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಎಸ್‌ಐಟಿಯವರು ವಿಚಾರಣೆಗೆ ಕರೆದರೆ ಎಲ್ಲ ಬಗೆಯ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಸುಧಾಕರ್ ಪಾತ್ರವೇನು..?