Asianet Suvarna News Asianet Suvarna News

ಮಹಾ ಎಡವಟ್ಟು..! ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ರಿಪೋರ್ಟ್ ಕೊಟ್ಟ ಆಸ್ಪತ್ರೆ

ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆ ದಂಧೆ ನಡೆಸುತ್ತಿದೆ. ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ಅಂತ ರಿಪೋರ್ಟ್ ನೀಡಿದೆ. ಯಲಹಂಕ ನ್ಯೂ ಟೌನ್‌ನ ಶ್ರೀ ಸಾಯಿ ಪ್ರಸಾದ್ ಆಸ್ಪತ್ರೆ ಇಂತ ಎಡವಟ್ಟು ಮಾಡಿದೆ. ತನ್ನ ಸಿಬ್ಬಂದಿಗೆ ತಪ್ಪು ರಿಪೋರ್ಟ್ ಕೊಟ್ಟಿದೆ ಆಸ್ಪತ್ರೆ.  ಆಸ್ಪತ್ರೆ ಸೀಲ್‌ಡೌನ್ ಆಗುವ ಭೀತಿಯಿಂದ ಪಾಸಿಟಿವ್ ಬಂದಿದ್ದನ್ನ ಮುಚ್ಚಿಡಲು ಆಸ್ಪತ್ರೆ ಎಂಡಿ ಪ್ರಯತ್ನಿಸಿದ್ದಾರೆ. ಸಿಬ್ಬಂದಿಗೆ ಕರೆ ಮಾಡಿ, ಆಸ್ಪತ್ರೆ ಹೆಸರು ಎಲ್ಲಿಯೂ ಹೇಳದಂತೆ ತಾಕೀತು ಮಾಡಿದ್ದಾರೆ. 
 

ಬೆಂಗಳೂರು (ಜು. 12): ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆ ದಂಧೆ ನಡೆಸುತ್ತಿದೆ. ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ಅಂತ ರಿಪೋರ್ಟ್ ನೀಡಿದೆ. ಯಲಹಂಕ ನ್ಯೂ ಟೌನ್‌ನ ಶ್ರೀ ಸಾಯಿ ಪ್ರಸಾದ್ ಆಸ್ಪತ್ರೆ ಇಂತ ಎಡವಟ್ಟು ಮಾಡಿದೆ. ತನ್ನ ಸಿಬ್ಬಂದಿಗೆ ತಪ್ಪು ರಿಪೋರ್ಟ್ ಕೊಟ್ಟಿದೆ ಆಸ್ಪತ್ರೆ.  ಆಸ್ಪತ್ರೆ ಸೀಲ್‌ಡೌನ್ ಆಗುವ ಭೀತಿಯಿಂದ ಪಾಸಿಟಿವ್ ಬಂದಿದ್ದನ್ನ ಮುಚ್ಚಿಡಲು ಆಸ್ಪತ್ರೆ ಎಂಡಿ ಪ್ರಯತ್ನಿಸಿದ್ದಾರೆ. ಸಿಬ್ಬಂದಿಗೆ ಕರೆ ಮಾಡಿ, ಆಸ್ಪತ್ರೆ ಹೆಸರು ಎಲ್ಲಿಯೂ ಹೇಳದಂತೆ ತಾಕೀತು ಮಾಡಿದ್ದಾರೆ. 

ಇನ್ನು ರಿಪೋರ್ಟ್ ಬಗ್ಗೆ ಅನುಮಾನಗೊಂಡ ವ್ಯಕ್ತಿ ಬೇರೆ ಕಡೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಆಸ್ಪತ್ರೆಯ ಎಡವಟ್ಟಿನಿಂದ ಯಾರಿಗೋ ಕೊಡಬೇಕಾದ ವರದಿಯನ್ನು ಇನ್ಯಾರಿಗೋ ಕೊಟ್ಟಿದೆ.