SR Vishwanath Murder Conspiracy : ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಭಯ ಹುಟ್ಟಿಸುತ್ತಿದೆ

ಯಲಹಂಕ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದು,  ಶಾಸಕರನ್ನೇ ಕೊಲ್ಲುವ ಪ್ಲಾನ್ ಭಯವನ್ನುತರಿಸಿದೆ ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.  ಮೈಸೂರಿನಲ್ಲಿಂದು ಮಾತನಾಡಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ  ಯಾರ ಜೊತೆ ರೌಡಿಗಳು ಇದ್ದಾರೆ ಎನ್ನುವುದು  ಜನರಿಗೆ ಗೊತ್ತಿದೆ ಎಂದರು.   

First Published Dec 2, 2021, 12:38 PM IST | Last Updated Dec 2, 2021, 1:17 PM IST

ಮೈಸೂರು (ಡಿ.02) :  ಯಲಹಂಕ ಶಾಸಕ ವಿಶ್ವನಾಥ್ (Vishwanath) ಹತ್ಯೆಗೆ ಸ್ಕೆಚ್ ಹಾಕಿದ್ದು,  ಶಾಸಕರನ್ನೇ ಕೊಲ್ಲುವ ಪ್ಲಾನ್ ಭಯವನ್ನು ತರಿಸಿದೆ ಎಂದು ಬಿಜೆಪಿ (BJP) ನಾಯಕ ಬಿ ವೈ ವಿಜಯೇಂದ್ರ (BY vijayendra) ಹೇಳಿದ್ದಾರೆ.  ಮೈಸೂರಿನಲ್ಲಿಂದು (Mysuru) ಮಾತನಾಡಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ  ಯಾರ ಜೊತೆ ರೌಡಿಗಳು ಇದ್ದಾರೆ ಎನ್ನುವುದು  ಜನರಿಗೆ ಗೊತ್ತಿದೆ.  ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಡಾಫೆ  ಹೇಳಿಕೆ ನೀಡಿದ್ದಾರೆ. ಇದು ಯಾವ ರೀತಿಯ ನಡೆ ಎಂದು ಪ್ರಶ್ನೆ ಮಾಡಿದರು.

SR Vishwanath Murder Conspiracy: ದೂರು ಕೊಡುವಲ್ಲಿಯೇ ಎಡವಿದರಾ ಶಾಸಕ..?

ಕಾಂಗ್ರೆಸ್ (Congress) ಮುಖಂಡರು ಇದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರ ಹಿನ್ನೆಲೆ ಏನು ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ.  ರಾಜಕೀಯವಾಗಿ ಧ್ವೇಷದಿಂದ ಈ ಹಂತಕ್ಕೆ ಇಳಿದಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.