ಗೃಹ ಸಚಿವರಿಂದ ಮಗಳಿಗೆ ಕಳಂಕ ಹೊರಿಸುವ ಪ್ರಯತ್ನ, ಹತ್ಯೆಯಾದ ನೇಹಾ ತಂದೆಯ ಆಕ್ರೋಶ!

ಗೃಹ ಸಚಿವರು ತಪ್ಪು ಹೇಳಿಕೆ ನೀಡಿ ಮಗಳಿಗೆ ಕಳಂಕ ತರುವ ಪ್ರಯತ್ನ, ಲವ್ ಜಿಹಾದ್ ಷಡ್ಯಂತ್ರಕ್ಕೆ ಮಗಳು ಬಲಿ ಎಂದ ತಂದೆ, ಮೋದಿ ಪರವಾಗಿ ಹಾಡು ರಚಿಸಿದ ಯುವಕನಿಗೆ ಮುಸ್ಲಿಮರಿಂದ ಹಲ್ಲೆ, ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಹರ್ಷಿಕಾ ಪುಣಚ್ಚ-ಭುವನ್ ಮೇಲೆ ಹಲ್ಲೆಗೆ ಯತ್ನ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Apr 19, 2024, 11:20 PM IST | Last Updated Apr 19, 2024, 11:20 PM IST

ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಫಯಾಜ್‌ನಿಂದ ಬರ್ಬರವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹೀರೇಮಠ್ ಅಂತ್ಯಸಂಸ್ಕಾರ ಇಂದು ನಡೆದಿದೆ. ಇತ್ತ ಆರೋಪಿ ಫಯಾಜ್‌ನನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  ಆದರೆ ನೇಹಾ ಹತ್ಯೆ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಆರಂಭಿಕ ಹಂತದಲ್ಲೇ ಹಳ್ಳ ಹಿಡಿಯುತ್ತಾ ಅನ್ನೋ ಚರ್ಚೆಗಳು ಜೋರಾಗುತ್ತಿದೆ. ಕಾರಣ ನೇಹಾ ಹತ್ಯೆ ಲವ್ ಜಿಹಾದ್ ಅಲ್ಲ, ಇದೊಂದು ಆಕಸ್ಮಿಕ ಘಟನೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಗೃಹ ಸಚಿವ ಪರಮೇಶ್ವರ್ ಹೇಳಿಕೆಯನ್ನು ನೇಹಾ ತಂದೆ ಖಂಡಿಸಿದ್ದಾರೆ. ನನ್ನ ಮಗಳಿಗೆ ಕಳಂಕ ತರುವ ಪ್ರಯತ್ನ ಮಾಡಬೇಡಿ. ಇದು ಲವ್ ಜಿಹಾದ್ ಹತ್ಯೆ ಎಂದು ನೇಹಾ ತಂದೆ ಹೇಳಿದ್ದಾರೆ.