Asianet Suvarna News Asianet Suvarna News

Modi@20 ಮೋದಿ ಆಡಳಿತಕ್ಕೆ ಸುಧಾಮೂರ್ತಿ ಮೆಚ್ಚುಗೆ

ಸಮರ್ಥ ನಾಯಕ ಬೇರೆಯವರಿಗೆ ಕೆಲಸ ಮಾಡುತ್ತಾರೆ, ತನಗಾಗಿ ಏನು ಮಾಡಿಕೊಳ್ಳಲ್ಲ. ಮೋದಿ ಒಬ್ಬ ಸಮರ್ಥ ನಾಯಕ, ಮೋದಿ ಸಾಮಾನ್ಯ ಜನರ ಜೊತೆ ಬೆರೆಯುತ್ತಾರೆ..ಮೋದಿಯವರಲ್ಲಿ ನಾನು ಆ ಗುಣಗಳನ್ನು ಕಂಡೆ. ಮಾತಿನಿಂದ ಏನು ಬದಲಾವಣೆ ಆಗೋದಿಲ್ಲ. ಕೃತಿಯಿಂದ ಆಗುತ್ತದೆ ಎಂದು ಮೋದಿ@20 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

First Published Jun 27, 2022, 6:47 PM IST | Last Updated Jun 27, 2022, 6:47 PM IST

ಬೆಂಗಳೂರು (ಜೂನ್ 27): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಕುರಿತಾಗಿ ಬಿಡುಗಡೆಯಾಗಿರುವ ಮೋದಿ@20 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ (chairperson of Infosys Foundation sudha murthy), ಮೋದಿ ಆಡಳತಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. 

ಮೋದಿ @20  ಪುಸ್ತಕದಲ್ಲಿ ನಾನೊಂದು ಲೇಖನ ಬರೆದಿದ್ದೇನೆ. ಅದರ ಹೆಸರು then comes the winds of change ಅಂತ. ನಾನು ಮೋದಿಯವರನ್ನು ಯಾವ ರೀತಿಯಲ್ಲೂ ಬಲ್ಲವಳಲ್ಲ. ಅವರ ಜತೆ ನಾನು ಕೆಲಸವನ್ನು ಮಾಡಿಲ್ಲ. ಅವರಿರೋದು ದಿಲ್ಲಿ, ನಾನಿರೋದು ಹಳ್ಳಿ. ಅವರ ಬಗ್ಗೆ ಬರೆದುಕೊಡಿ ಅಂದಾಗ ಏನು ಬರೆಯಬೇಕೆಂದು ಗೊತ್ತಾಗ್ಲಿಲ್ಲ. ನನ್ನ ಬಳಿ‌ ಅಂಕಿ ಅಂಶಗಳೂ ಇರಲಿಲ್ಲ. ನನಗೆ ಗೊತ್ತಿರುವ ಮಾಹಿತಿ ಬರೆದಿದ್ದೇನೆ ಎಂದು ಹೇಳಿದರು.

ಬೆಂಗಳೂರು ತರ ನಮ್ಮ ಧಾರವಾಡವನ್ನೂ ಮಾಡಿ: ಸಿಎಂಗೆ ಮನವಿ ಮಾಡಿದ ಸುಧಾಮೂರ್ತಿ!

ಈ ಲೇಖನ ಬರೆಯುತ್ತಾ ಬರೆಯುತ್ತಾ ಮೋದಿಯವರನ್ನು ನೋಡುವ ದೃಷ್ಟಿಕೋನ ಬದಲಾಯಿತು. ಒಬ್ಬ ಮಹಾನ್ ನಾಯಕನ ಗುಣಗಳೇ ಬೇರೆ ಇರುತ್ತವೆ. ಗುಜರಾತ್ ಸಿಎಂ ಆಗಿ 12 ವರ್ಷ ಹಾಗೂ ಪ್ರಧಾನಿ ಆಗಿ 8 ವರ್ಷ . ಒಟ್ಟು 20 ವರ್ಷ ಮೋದಿ ನಿರಂತರ ಆಳ್ವಿಕೆ ಮಾಡಿದ್ದಾರೆ ಎಂದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹಲೋಟ್ ಭಾಗಿ, ಸಚಿವ ಸುನೀಲ್ ಕುಮಾರ್,  ವಿ ಸೋಮಣ್ಣ, ಬಿಸಿ ಪಾಟೀಲ್,   ಶಾಸಕ ಉದಯ್ ಗರುಡಾಚಾರ್ ಭಾಗಿಯಾಗಿದ್ದರು.

Video Top Stories