ತಿರುಮಲದ ಲಡ್ಡುವಿಗಿದೆ 500 ವರ್ಷದ ಇತಿಹಾಸ, ಲಡ್ಡು ಮಾರಾಟದಿಂದಲೇ ಬರುತ್ತೆ ವರ್ಷಕ್ಕೆ 500 ಕೋಟಿ ಆದಾಯ
ತಿರುಪತಿ ಲಡ್ಡು ತಿಮ್ಮಪ್ಪನ ಮಹಾಪ್ರಸಾ ಇದಕ್ಕಿದೆ ಶತಮಾನಗಳ ಚರಿತ್ರೆ,500 ವರ್ಷದ ಇತಿಹಾಸ. 500 ಕೋಟಿಯ ಆದಾಯ ಇರುವ ಲಡ್ಡಿನ ಮೇಲೆ ಈಗ ಶುರುವಾಗಿರೋದು ಇದೆಂಥಹ ಲಡಾಯಿ..?
ಲಡ್ಡು ಅಂದ್ರೆ ತಿರುಪತಿ ಲಡ್ಡು ಅನ್ನೋವಷ್ಟು ಫೇಮಸ್ ಅಲ್ಲಿನ ಲಡ್ಡು. ಆದ್ರೆ ಅದೇ ಲಡ್ಡುವಿಗೀಗ ಕಲಬೆರಕೆಯ ಕಳಂಕ ಅಂಟಿಕೆ. ನಮ್ಮ ನಂದಿನ ತುಪ್ಪದ ಬಳಕೆ ಬಿಟ್ಟ ಬಳಿಕ ಇಷ್ಟೆಲ್ಲಾ ರಾದ್ಧಾಂತ ಅಲ್ಲಾಗಿದೆ. ಅದ್ರಿಂದ ಕರ್ನಾಟಕದಲ್ಲಿಯೂ ಅಸಾಮಾಧಾನ, ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ್ಕಕೂ ಅವಿನಾಭವ ಸಂಬಂಧ.. ದಶಕಗಳ ಕಾಲ ಲಡ್ಡು ತಯಾರಿಕೆಗೆ ತುಪ್ಪ ಪೂರೈಸಿದ ಹಿರಿಮೆ ನಮ್ಮ ಕೆಎಂಎಫ್ಗಿದೆ. ಆದ್ರೆ, ಯಾವಾಗ ನಂದಿನಿ ತುಪ್ಪ ಬಿಟ್ಟು ಬೇರೆ ತುಪ್ಪ ಬಳಸೋಕೆ ಶುರು ಮಾಡಿದ್ರೋ ಅಗ್ಲೇ ಶುರುವಾಯ್ತು ಲಡ್ಡು ಲಡಾಯಿ. ಹೀಗಾಗಿ ಕರ್ನಾಟಕದ ರಾಜಕೀಯ ನಾಯಕರು ಸಹ ತಮ್ಮ ಆಕ್ರೋಶ, ಅಸಮಾಧಾನವನ್ನ ಹೊರಹಾಕ್ತಾ ಇದ್ದಾರೆ.