Asianet Suvarna News Asianet Suvarna News

MLC Elections: ಡಿಕೆಶಿ- ಜಾರಕಿಹೊಳಿ ಸವಾಲ್, ಡಿ. 14 ಕ್ಕೆ ಉತ್ತರ ಕೊಡ್ತಾರಂತೆ ಸಾಹುಕಾರ್!

Dec 3, 2021, 5:07 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 03): ವಿಧಾನ ಪರಿಷತ್ ಚುನಾವಣಾ (MLC Elections) ಅಖಾಡ ರಂಗೇರಿದೆ. ಅದರಲ್ಲೂ ಬೆಳಗಾವಿ (Belagavi) ಚುನಾವಣಾ ಕಣ ರಾಜ್ಯದ ಗಮನ ಸೆಳೆದಿದೆ. ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಚನ್ನರಾಜ್ ಸ್ಪರ್ಧಿಸಿದರೆ, ಬಿಜೆಪಿಯಿಂದ ಮಹಾಂತೇಶ್ ಕವಟಗಿಮಠ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಶತಾಯ ಗತಾಯ ಕಾಂಗ್ರೆಸ್‌ನ ಸೋಲಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆಶಿಗೆ ಪಾಠ ಕಲಿಸುವುದು ಜಾರಕಿಹೊಳಿ ಉದ್ದೇಶ. ಕಾಂಗ್ರೆಸ್‌ನ ಸೋಲಿಸುವುದಾಗಿ ಜಾರಕಿಹೊಳಿ ಸವಾಲು ಹಾಕಿದ್ರೆ, ಅದಕ್ಕೆ ಸವ್ವಾ ಸೇರು ಎಂಬಂತೆ ಡಿಕೆಶಿಯೂ ಸವಾಲು ಹಾಕಿದ್ದಾರೆ. 

'ಫಲಿತಾಂಶದ ದಿನವಾದ ಡಿಸೆಂಬರ್​ 14ರಂದು ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ' ಎಂದು ಜಾರಕಿಹೊಳಿ ಹೇಳಿದ್ದಾರೆ. 

Video Top Stories