ತನ್ವೀರ್‌ ಸೇಠ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ, ಸಂಸದ ಮುನಿಸ್ವಾಮಿ ಕೆಂಡಾಮಂಡಲ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ದಾಖಲಾದ ಕೇಸ್‌ಗಳನ್ನು ವಾಪಾಸ್‌ ತೆಗೆದುಕೊಳ್ಳುವಂತೆ ಪತ್ರ ಬರೆದ ಶಾಸಕ ತನ್ವೀರ್‌ ಸೇಠ್‌, ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 

First Published Jul 26, 2023, 6:01 PM IST | Last Updated Jul 26, 2023, 6:01 PM IST

ಬೆಂಗಳೂರು (ಜು.26): ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ದಾಖಲಾದ ಕೇಸ್‌ಗಳನ್ನು ವಾಪಾಸ್‌ ತೆಗೆದುಕೊಳ್ಳುವಂತೆ ಪತ್ರ ಬರೆದ ತನ್ವೀರ್‌ ಸೇಠ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಅವರದೇ ಪಕ್ಷದ ಶಾಸಕರನ್ನು ಈಗೇನು ಅವರು ಅಮಾಯಕರು ಎಂದು ಹೇಳುತ್ತಿದ್ದಾರಲ್ಲ ಅವರು ಕೊಲೆ ಮಾಡಲು ಪ್ರಯತ್ನ ಮಾಡಿದ್ದರು. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಗಲಭೆ ನಡೆಸಿದವರ ರಕ್ಷಣೆ ಮುಂದಾಗಿದ್ದೀರಿ. ಇದು ನಿಜಕ್ಕೂ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಕೇಸ್‌ ಹಾಕಿದೆ: ಡಿಸಿಎಂ ಡಿಕೆ ಶಿವಕುಮಾರ್‌

ತನ್ವೀರ್‌ ಸೇಠ್‌ ಅವರ ಮೇಲೆ ಅವರದೇ ಸಂಘಟನೆಯವರು ಕೊಲೆ ಮಾಡಲು ಪ್ರಯತ್ನ ಮಾಡಿದ್ದರು. ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿಯೇ ಅವರ ಮೇಲಿನ ಕೇಸ್‌ಗಳನ್ನು ತೆಗೆಸುವ ಪ್ಲ್ಯಾನ್‌ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.