Asianet Suvarna News Asianet Suvarna News

ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕಿಡ್ನಿ ವೈಫಲ್ಯದಿಂದ ಬಳಲತ್ತಿದ್ದ ಈತನಿಗೆ ಕೊರೋನಾ ಸೋಂಕು ತಗುಲಿತ್ತು. ಇಂದು ಬೆಳಗ್ಗೆ ಒಂದು ಪ್ಲೇಟ್ ಇಡ್ಲಿ ತಿಂದ ಬಳಿಕ ಮತ್ತೊಂದು ಪ್ಲೇಟ್ ಇಡ್ಲಿ ಬೇಕು ಎಂದು ಹೇಳಿದ್ದರು. ಇಡ್ಲಿ ತರಲು ಸಿಬ್ಬಂದಿ ಹೊರಗೆ ತೆರಳಿದ ವೇಳೆ ತುರ್ತು ನಿರ್ಗಮನ ಬಾಗಿಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ಬೆಂಗಳೂರು(ಏ.27): ಇಂದು ಬೆಳಗ್ಗೆ(ಸೋಮವಾರ) ಕೊರೋನಾ ಸೋಂಕಿತ ನಗರದ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಆ ವ್ಯಕ್ತಿ ಮಾಡಿದ್ದೇನು ಎನ್ನುವುದರ ಮಾಹಿತಿ ಇದೀಗ ಲಭ್ಯವಾಗಿದೆ.

ಕಿಡ್ನಿ ವೈಫಲ್ಯದಿಂದ ಬಳಲತ್ತಿದ್ದ ಈತನಿಗೆ ಕೊರೋನಾ ಸೋಂಕು ತಗುಲಿತ್ತು. ಇಂದು ಬೆಳಗ್ಗೆ ಒಂದು ಪ್ಲೇಟ್ ಇಡ್ಲಿ ತಿಂದ ಬಳಿಕ ಮತ್ತೊಂದು ಪ್ಲೇಟ್ ಇಡ್ಲಿ ಬೇಕು ಎಂದು ಹೇಳಿದ್ದರು. ಇಡ್ಲಿ ತರಲು ಸಿಬ್ಬಂದಿ ಹೊರಗೆ ತೆರಳಿದ ವೇಳೆ ತುರ್ತು ನಿರ್ಗಮನ ಬಾಗಿಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೇಲ್ನೋಟಕ್ಕೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದನಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.

ಬೆಂಗಳೂರಿನ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಕೊರೋನಾ ಸೋಂಕಿತ..!

ಈತ ಆಟೋ ಡ್ರೈವರ್ ಆಗಿದ್ದ, ಮದುವೆಯಾಗಿರಲಿಲ್ಲ, ಅಣ್ಣನ ಮನೆಯಲ್ಲಿ ವಾಸವಾಗಿದ್ದ ಎನ್ನುವ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಈತ 4 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈತನನ್ನು ಕೊರೋನಾ ರೋಗಿ ನಂಬರ್ 466 ಎಂದು ಗುರುತಿಸಲಾಗಿತ್ತು. ಈತನ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.