Asianet Suvarna News Asianet Suvarna News

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಯಥಾಸ್ಥಿತಿ: ರಾತ್ರಿ 9 ರ ನಂತರ ಗಣೇಶೋತ್ಸವಕ್ಕೆ ಅವಕಾಶವಿಲ್ಲ

ಕೊರೋನಾ ತಡೆಗೆ ಸರ್ಕಾರ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದೆ. ರಾತ್ರಿ 9 ಗಂಟೆ ನಂತರ ಗಣೇಶೋತ್ಸವದಲ್ಲಿ ಭಾಗಿಯಾಗುವಂತಿಲ್ಲ. ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೈಟ್ ಕರ್ಫ್ಯೂ, ವೀಕಂಡ್ ಕರ್ಫ್ಯೂ ಯಥಾಸ್ಥಿತಿಯಲ್ಲಿರಲಿದೆ.

ಬೆಂಗಳೂರು (ಸೆ. 05): ಕೊರೋನಾ ತಡೆಗೆ ಸರ್ಕಾರ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದೆ. ರಾತ್ರಿ 9 ಗಂಟೆ ನಂತರ ಗಣೇಶೋತ್ಸವದಲ್ಲಿ ಭಾಗಿಯಾಗುವಂತಿಲ್ಲ. ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೈಟ್ ಕರ್ಫ್ಯೂ, ವೀಕಂಡ್ ಕರ್ಫ್ಯೂ ಯಥಾಸ್ಥಿತಿಯಲ್ಲಿರಲಿದೆ.

ನಗರಗಳಲ್ಲಿ ವಾರ್ಡಿಗೊಂದು, ಹಳ್ಳಿಗಳಲ್ಲಿ ಗ್ರಾಮಕ್ಕೊಂದು ಗಣಪತಿ: ಸರ್ಕಾರದ ರೂಲ್ಸ್

 ಗಣೇಶೋತ್ಸವ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದ. ಗರಿಷ್ಠ 5 ದಿನ ಆಚರಣೆಗೆ ಅವಕಾಶ ನೀಡಲಾಗಿದೆ. ವಾರ್ಡ್‌ಗೊಂದು, ಗ್ರಾಮಕ್ಕೊಂದು ಗಣೇಶ ಕೂರಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ, ಡಿಜೆಗಳಿಗೆ ಅವಕಾಶವಿಲ್ಲ. ಶಾಲಾ-ಕಾಲೇಜುಗಳಲ್ಲಿ ಗಣೇಶ ಕೂರಿಸುವಂತಿಲ್ಲ. 20 ಜನರೊಂದಿಗೆ ವಿಸರ್ಜನೆಗೆ ಅವಕಾಶ ಕೊಡಲಾಗಿದೆ. 

Video Top Stories