ರೈತರ ಪ್ರತಿಭಟನೆಗೆ ಟಗರು ಸಾಥ್; ಈ ಟಗರಿಗೊಂದು ವಿಶೇಷತೆಯಿದೆಯಂತೆ!

ರೈತರ ಪ್ರತಿಭಟನೆಗೆ ಅವರ ಸಾಕು ಪ್ರಾಣಿಗಳೂ ಸಾಥ್ ನೀಡಿವೆ. ಮಾಲಿಕನ ಕಷ್ಟ ನಮಗೂ ಅರ್ಥವಾಗುತ್ತದೆ ಎಂದು ಹೇಳುವಂತಿದೆ. ಇಂದು ಕರ್ನಾಟಕ ಬಂದ್‌ಗೆ ಟಗರು ಕೂಡಾ ಸಾಥ್ ನೀಡಿದೆ. 
 

First Published Sep 28, 2020, 2:19 PM IST | Last Updated Sep 28, 2020, 3:00 PM IST

ಬೆಂಗಳೂರು (ಸೆ. 28): ರೈತರ ಪ್ರತಿಭಟನೆಗೆ ಅವರ ಸಾಕು ಪ್ರಾಣಿಗಳೂ ಸಾಥ್ ನೀಡಿವೆ. ಮಾಲಿಕನ ಕಷ್ಟ ನಮಗೂ ಅರ್ಥವಾಗುತ್ತದೆ ಎಂದು ಹೇಳುವಂತಿದೆ. ಇಂದು ಕರ್ನಾಟಕ ಬಂದ್‌ಗೆ ಟಗರು ಕೂಡಾ ಸಾಥ್ ನೀಡಿದೆ. 

'ಎಪಿಎಂಸಿಯಲ್ಲೂ ಲೋಪಗಳಿವೆ, ರೈತರ ಉತ್ಪನ್ನ ಮರು ಹರಾಜಾಗಿರುವ ಇತಿಹಾಸವೇ ಇಲ್ಲ'

ಕರವೇ ಕಾರ್ಯಕರ್ತರೊಬ್ಬರು ಟಗರನ್ನು ಕರೆದುಕೊಂಡು ಬಂದು ಪ್ರತಿಭಟನೆ ನಡೆಸಿದ್ದಾರೆ. ರೈತರು ಪ್ರಾಣಿ ಸಾಕಾಣಿಕೆಯನ್ನೂ ಮಾಡುತ್ತಾರೆ. ಅವು ಕೂಡಾ ರೈತರ ಮನೆಯ ಸದಸ್ಯರಿದ್ದಂತೆ.  ಹಾಗಾಗಿ ಸಾಂಕೇತಿಕವಾಗಿ ಕರೆದುಕೊಂಡು ಬಂದಿರುವುದಾಗಿ ಕರವೇ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಸಾಕಷ್ಟು ಪ್ರತಿಭಟನೆಯಲ್ಲಿ ಈ ಟಗರು ಭಾಗವಹಿಸಿದೆ ಎನ್ನುವುದು ವಿಶೇಷ.