Asianet Suvarna News Asianet Suvarna News

ಇಂದಿನಿಂದ ವಿಧಾನಮಂಡಲ ಅಧಿವೇಶನ: ವಿಪಕ್ಷಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದೆ ಬಿಜೆಪಿ

10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ 18 ವಿಧೇಯಕಗಳನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. 10 ವಿಧೇಯಕಗಳು, ನಾಲ್ಕು ಸುಗ್ರೀವಾಜ್ಞೆಗಳು ಮತ್ತು ನಾಲ್ಕು ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕ ಸೇರಿ ಒಟ್ಟು 18 ವಿಧೇಯಕಗಳು ಮಂಡನೆಯಾಗಲಿವೆ.

ಬೆಂಗಳೂರು (ಸೆ. 13): ಕೋವಿಡ್‌ ನಿರ್ವಹಣೆಯಲ್ಲಿ ವೈಫಲ್ಯ, ಭ್ರಷ್ಟಾಚಾರ, ಸಾಲದ ಹೊರೆ, ಬೆಲೆ ಏರಿಕೆ, ಜಾತಿ ಗಣತಿ ವರದಿ ಮಂಡನೆಗೆ ವಿಳಂಬ ಸೇರಿದಂತೆ ಹಲವು ಅಸ್ತ್ರಗಳೊಂದಿಗೆ ಇಂದು ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಕಲಾಪ ಮಾತಿನ ಸಮರದಿಂದ ಕೂಡಿರುವ ಸಾಧ್ಯತೆ ಇದೆ.

ಕಲಬುರ್ಗಿ ಪಾಲಿಕೆ ಗುದ್ದಾಟ: ದಳದ ಬೆಂಬಲ ಕಾಂಗ್ರೆಸ್‌ಗೋ, ಜೆಡಿಎಸ್‌ಗೋ.? ಇಂದು ನಿರ್ಧಾರ

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ  ಮೊಟ್ಟಮೊದಲ ವಿಧಾನಮಂಡಲ ಅಧಿವೇಶನ ಎದುರಿಸುತ್ತಿದ್ದಾರೆ. ಬೆಲೆ ಏರಿಕೆ, ನೆರೆ, ಪಡಿತರದಾರರಿಗೆ ಆಹಾರಧಾನ್ಯ ಕಡಿತ, ದೇಶವನ್ನೇ ನಡುಗಿಸಿದ ಮೈಸೂರು ಅತ್ಯಾಚಾರ ಪ್ರಕರಣ, ಜಾತಿ ಗಣತಿ ವರದಿ ಜಾರಿಗೆ ಆಗ್ರಹ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಸಮುದಾಯಗಳಿಗೆ ಇನ್ನೂ ದೊರೆಯದ ನೆರವು ಹಾಗೂ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಹೀಗೆ, ಸಾಲು-ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ತುದಿಗಾಲಲ್ಲಿ ನಿಂತಿವೆ.