Asianet Suvarna News Asianet Suvarna News

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಎಲ್ಲವೂ ಅಯೋಮಯ: ನೀರು, ಆಹಾರ ಸಿಗದೆ ಕಂಗಾಲಾದ ಕನ್ನಡಿಗರು

*  ಬಂಕರ್‌ಗಳಲ್ಲಿ ಆಶ್ರಯ ಪಡೆದ 350 ಕ್ಕೂ ಹೆಚ್ಚು ಕನ್ನಡಿಗರು 
*  ಬಂಕರ್‌ವೊಳಗೆ ಕೇಳಿಸುತ್ತಿದೆ ಬಾಂಬ್‌, ಶೆಲ್‌ ದಾಳಿಯ ಸದ್ದು 
*  ಉಕ್ರೇನ್‌ನಲ್ಲಿ ಕ್ಲೀನಿಕ್‌, ಮೆಡಿಕಲ್‌ ಸ್ಟೋರ್‌ ಬಂದ್‌

First Published Mar 1, 2022, 12:49 PM IST | Last Updated Mar 1, 2022, 12:49 PM IST

ಬೆಂಗಳೂರು(ಮಾ.01): ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಎಲ್ಲವೂ ಅಯೋಮಯವಾಗಿದೆ. ಹೌದು,  ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳಿಗೆ ರೋಗದ ಭೀತಿ ಎದುರಾಗಿದೆ. ಸರಿಯಾಗಿ ನೀರು, ಆಹಾರ ಸಿಗದೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.  ಇದರ ಜೊತೆಗೆ ನೆಗಡಿ, ಜ್ವರದ ಭೀತಿ ಕಾಡುತ್ತಿದೆ. ಬಂಕರ್‌ಗಳಲ್ಲಿರುವ ಹಲವು ವಿದ್ಯಾರ್ಥಿಗಳಿಗೆ ಜ್ವರ ಸೇರಿ ಅನೇಕ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ಸದ್ಯ ಉಕ್ರೇನ್‌ನಲ್ಲಿ ಕ್ಲೀನಿಕ್‌, ಮೆಡಿಕಲ್‌ ಸ್ಟೋರ್‌ಗಳು ಬಂದ್‌ ಆಗಿವೆ. 350 ಕ್ಕೂ ಹೆಚ್ಚು ಕನ್ನಡಿಗರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ.  ಬಂಕರ್‌ವೊಳಗೆ  ಬಾಂಬ್‌, ಶೆಲ್‌ ದಾಳಿಯ ಸದ್ದು ಕೇಳಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.  

Russia Ukraine Crisis: ಕೈಯಲ್ಲಿ ಬಾಂಬು, ಬಾಯಲ್ಲಿ ಶಾಂತಿ ಮಂತ್ರ ಪಠಿಸುತ್ತಿದೆ ರಷ್ಯಾ