ಆರೆಸ್ಸೆಸ್‌ ಹೇಳಿದವರನ್ನು ತಂದು ಜೈಲಲ್ಲಿ ಹಾಕಿದ್ದಾರೆ, ಅವರೆಲ್ಲ ಅಮಾಯಕರು: ಆಲಂ ಪಾಷಾ!

ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಪ್ರಕರಣಗಳಲ್ಲಿ ಅಮಾಯಕರು ಬಂಧಿತರಾಗಿದ್ದಾರೆ. ಅವರ ಮೇಲಿನ ಕೇಸ್‌ಗಳನ್ನು ರದ್ದು ಮಾಡಬೇಕು ಎಂದು ದಿ ಹೆಲ್ಪಿಂಗ್‌ ಸಿಟಿಜನ್‌ ಸಂಸ್ಥೆಯ ಆಲಂ ಪಾಷಾ ಹೇಳಿಕೆ ನೀಡಿದ್ದಾರೆ.

First Published Jul 26, 2023, 8:33 PM IST | Last Updated Jul 26, 2023, 8:33 PM IST

ಬೆಂಗಳೂರು (ಜು.26): ಕೋಮುಗಲಭೆ ಕೇಸ್‌ನಲ್ಲಿ 550ಕ್ಕೂ ಹೆಚ್ಚಿನ ಮುಸ್ಲಿಂ ವ್ಯಕ್ತಿಗಳ ಬಂಧನವಾಗಿದೆ. ಇವರೇ ಗಲಭೆ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಆಧಾರವಿಲ್ಲ. ಅಮಾಯಕರನ್ನು ಸುಮ್ಮನೆ ಅರೆಸ್ಟ್‌ ಮಾಡಲಾಗಿದೆ ಎಂದು ದಿ ಹೆಲ್ಪಿಂಗ್‌ ಸಿಟಿಜನ್‌ ಸಂಸ್ಥೆಯ ಆಲಂ ಪಾಷಾ ಹೇಳಿಕೆ ನೀಡಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಗಲಭೆ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಅಮಾಯಕರನ್ನು ಪೊಲೀಸರನ್ನು ಬಂಧಿಸಿದ್ದಾರೆ. ಮೂರುವರೆ ವರ್ಷಗಳಿಂದ ಅವರು ಜೈಲಿನಲ್ಲಿ, ಬೇಲ್‌ ನೀಡುವವರಿಲ್ಲ. ಆಟೋ ಚಾಲಕರು, ವಿದ್ಯಾರ್ಥಿಗಳು ಇದ್ದಾರೆ. ಅವರ ಕುಟುಂಬದ ಸ್ಥಿತಿ ಏನು? ಎಲ್ಲರೂ ಬಡತನದ ಕುಟುಂಬದಲ್ಲಿ ಬೆಳೆದವರು ಇವರ ಮೇಲಿನ ಕೇಸ್‌ಗಳನ್ನು ಸರ್ಕಾರ ಖುಲಾಸೆ ಮಾಡಬೇಕು ಎಂದಿದ್ದಾರೆ.

ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಕೇಸ್‌ ಹಾಕಿದೆ: ಡಿಸಿಎಂ ಡಿಕೆ ಶಿವಕುಮಾರ್‌

ಈ ಅಮಾಯಕರ ಮೇಲೆ ಯಾರೂ ದೂರು ನೀಡಿಲ್ಲ. ಅವರೇ ಈ ಕೃತ್ಯ ಎಸಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯಗಳಿಲ್ಲ. ಹಾಗಾಗಿ ಸರ್ಕಾರ ಇವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.