Asianet Suvarna News Asianet Suvarna News

ಶೀಘ್ರದಲ್ಲಿ ಹೊಸ ಮರಳು ನೀತಿ ಜಾರಿ, ಅಕ್ರಮ ಮರಳುಗಾರಿಕೆಗೆ ಕಡಿವಾಣ: ಹಾಲಪ್ಪ ಆಚಾರ್

ಶೀಘ್ರದಲ್ಲಿ ಹೊಸ ಮರಳು ನೀತಿ ಜಾರಿಗೆ ತಂದು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತೇವೆ. ಮರಳು ಸರಳೀಕರಣ ನೀತಿ ಅಧಿವೇಶನದ ಮುಂದಿದೆ ಒಪ್ಪಿಗೆ ಸಿಕ್ಕ ಕೂಡಲೇ ಜಾರಿಯಾಗುತ್ತೆ: ಹಾಲಪ್ಪ ಆಚಾರ್ 

Sep 27, 2021, 5:21 PM IST

ರಾಯಚೂರು (ಸೆ. 27): ಸಿದ್ದರಾಮಯ್ಯ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಗಳಾಗಿದ್ದವರು, ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ ಅಂತ ಬಾಯಿಗೆ ಬಂದಾಗೆ ಮಾತನಾಡ್ತಾರೆ. ಅವರು ಏನಾದರೂ ಮಾತನಾಡ್ತಾರೆ ಅಂತ ನಾವು ಮಾತನಾಡೋಕೆ ಆಗಲ್ಲ ಅಂತ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.‌ ಬಿಜೆಪಿಯವರು ಕೋಮುವಾದಿಗಳು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಹಾಲಪ್ಪ ಆಚಾರ್ ತಿರುಗೇಟು ನೀಡಿದ್ದಾರೆ.

ಶೀಘ್ರದಲ್ಲಿ ಹೊಸ ಮರಳು ನೀತಿ ಜಾರಿಗೆ ತಂದು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತೇವೆ. ಮರಳು ಸರಳೀಕರಣ ನೀತಿ ಅಧಿವೇಶನದ ಮುಂದಿದೆ ಒಪ್ಪಿಗೆ ಸಿಕ್ಕ ಕೂಡಲೇ ಜಾರಿಯಾಗುತ್ತೆ. ನೀತಿ ಜಾರಿಯಾದ ಕೂಡಲೇ ಬಹಳ ಸುಧಾರಣೆಯಾಗುತ್ತೆ, ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ. ನೇರವಾಗಿ ಗ್ರಾಹಕರಿಗೆ ಮರಳು ಕೊಡುವ ವ್ಯವಸ್ಥೆ ಮಾಡುತ್ತೇವೆ ಅಂತ ಸಚಿವ ಹಾಲಪ್ಪ ಆಚಾರ್ ಹೇಳಿದರು.