ಫಾಝಿಲ್ ಹತ್ಯೆ: ತನಿಖೆಯಲ್ಲಿ ಲವ್ ಅಫೇರ್ ಅಂಶ ಕಂಡು ಬಂದಿಲ್ಲ: ಮಂಗಳೂರು ಕಮಿಷನರ್ ಶಶಿಕುಮಾರ್ ಸ್ಪಷ್ಟನೆ
'ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಾವು ಬಿಗಿ ಬಂದೋಬಸ್ತ್ ವಹಿಸದ್ದೇವೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ಈಗ ನಾವು ಯಾವುದೇ ಮಾಹಿತಿ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕ ನಾವು ಬಹಿರಂಗಪಡಿಸುತ್ತೇವೆ. ಫಾಸಿಲ್ ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ; ಮಂಗಳೂರು ಕಮಿಷನರ್
ಮಂಗಳೂರು (ಜು. 29): ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಉದ್ವಿಗ್ನತೆ ಸಹಜ ಸ್ಥಿತಿಗೆ ಮರಳುವ ಮೊದಲೇ ಜಿಲ್ಲೆಯ ಮತ್ತೊಂದು ಕಡೆ ಯುವಕನ ಹತ್ಯೆ ನಡೆದಿದೆ. ಸುರತ್ಕಲ್‌ನಲ್ಲಿ ಯುವಕನ ಮೇಲೆ ತಲವಾರು ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಗಂಭೀರಾವಸ್ಥೆಯಲ್ಲಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮುಖ್ಯಮಂತ್ರಿ ಇದ್ದಾಗಲೇ ಈ ಪ್ರಕರಣ ನಡೆದಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.
News Hour:ಪ್ರವೀಣ್ ಹಂತಕರ ಬೇಟೆಯಲ್ಲಿ ಇಬ್ಬರು ಅರೆಸ್ಟ್: ಬಿಜೆಪಿ ಯುವ ಮುಖಂಡನ ಹತ್ಯೆಗೆ SDPI ಲಿಂಕ್?
'ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಾವು ಬಿಗಿ ಬಂದೋಬಸ್ತ್ ವಹಿಸದ್ದೇವೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ಈಗ ನಾವು ಯಾವುದೇ ಮಾಹಿತಿ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕ ನಾವು ಬಹಿರಂಗಪಡಿಸುತ್ತೇವೆ. ಫಾಸಿಲ್ ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಸುದ್ದಿಗಳು ಹರಿದಾಡುತ್ತಿದೆ. ಇವುಗಳಿಗೆಲ್ಲಾ ಕಿವಿಕೊಡಬೇಡಿ. ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ನಮಗೆ ಸಹಕರಿಸಬೇಕು' ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.