Asianet Suvarna News Asianet Suvarna News

ಚಾಮರಾಜಪೇಟೆ ಈದ್ಗಾ ವಿವಾದ: 14 ವರ್ಷಗಳ ಹಿಂದಿನ ಸಂಧಾನದಲ್ಲಿ ತಕರಾರು ಬಂದಿದ್ಧೇಕೆ..?

ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಸುದೀರ್ಘ 14 ವರ್ಷದ ಇತಿಹಾಸವಿದೆ. 14 ವರ್ಷಗಳ ಹಿಂದೆ ಹಿಂದೂ-ಮುಸ್ಲಿಮರ ಸಂಧಾನ ಸಭೆಗೆ ಈ ಮೈದಾನ ಸಾಕ್ಷಿಯಾಗಿತ್ತು. ಆಗ ಎದ್ದಿದ್ದ ವಿವಾದವನ್ನ ಬಗೆ ಹರಿಸೋಕೆ ಸಂಧಾನ ಅವಶ್ಯವಾಗಿತ್ತು. ಅದರಂತೆ ಕೆಲವು ಒಪ್ಪಂದಗಳನ್ನ ಮಾಡಿಕೊಳ್ಳಲಾಗಿತ್ತು. 2006ರಲ್ಲಿ ಈದ್ಗಾ ಮೈದಾನದಲ್ಲಿನ ಟವರ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತೆ. 

Aug 8, 2022, 4:54 PM IST

ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಸುದೀರ್ಘ 14 ವರ್ಷದ ಇತಿಹಾಸವಿದೆ. 14 ವರ್ಷಗಳ ಹಿಂದೆ ಹಿಂದೂ-ಮುಸ್ಲಿಮರ ಸಂಧಾನ ಸಭೆಗೆ ಈ ಮೈದಾನ ಸಾಕ್ಷಿಯಾಗಿತ್ತು. ಆಗ ಎದ್ದಿದ್ದ ವಿವಾದವನ್ನ ಬಗೆ ಹರಿಸೋಕೆ ಸಂಧಾನ ಅವಶ್ಯವಾಗಿತ್ತು. ಅದರಂತೆ ಕೆಲವು ಒಪ್ಪಂದಗಳನ್ನ ಮಾಡಿಕೊಳ್ಳಲಾಗಿತ್ತು. 2006ರಲ್ಲಿ ಈದ್ಗಾ ಮೈದಾನದಲ್ಲಿನ ಟವರ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತೆ. ಅದನ್ನ ಸರಿಪಡಿಸಲು ಆಗ ಮೊದಲ ಬಾರಿ ಶಾಸಕರಾಗಿದ್ದ ಜಮೀರ್ ಅಹ್ಮದ್ ಖಾನ್ ಮುಂದಾಗ್ತಾರೆ. ಆಗ ಜಾಗ ಯಾರಿಗೆ ಸೇರಿದ್ದು ಅನ್ನೋ ವಿಚಾರಕ್ಕೆ ವಿವಾದ ಸೃಷ್ಟಿಯಾಗುತ್ತೆ.

'ಈದ್ಗಾ ಮೈದಾನ ಜಮೀರ್ ಖಾನ್ ಪೂರ್ವಿಕರ ಪ್ರಾಪರ್ಟಿ ಅಲ್ಲ, ನಾವು ಗಣೇಶ ಕೂರಿಸ್ತೀವಿ'

ಟವರ್ ನವೀಕರಣಕ್ಕೆ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಅವರು ತೀವ್ರ ವಿರೋಧ ವ್ಯಕ್ತಪಡಿಸ್ತಾರೆ. ಜಾಗದ ಮಾಲಿಕತ್ವದಲ್ಲಿ ಇರೋ ಗೊಂದಲ ನಿವಾರಣೆ ಮೊದಲು ಆಗ್ಬೇಕು ಅನ್ನೋದು ಅವರ ವಾದವಾಗಿತ್ತು. 

 ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂಮರಿಗೆ ವರ್ಷದಲ್ಲಿ ಎರಡು ಬಾರಿ ನಮಾಜ್ ಮಾಡೋಕೆ ಅವಕಾಶವಿದೆ. ಉಳಿದ ದಿನಗಳಲ್ಲಿ ಮಕ್ಕಳು ಅಲ್ಲಿ ಆಟವಾಡಬಹುದು, ಸಾರ್ವಜನರಿಕರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬಹುದು ಎಂದು ಸುಪ್ರಿಂ ಕೋರ್ಟ್ ತುಂಬಾ ಸ್ಪಷ್ಟವಾಗಿ ಹೇಳಿತ್ತು. ಈದ್ಗಾ ಮೈದಾನ ಈವರೆಗೆ ಅನೇಕ ಕಾರ್ಯಕ್ರಮಗಳನ್ನ ಕಂಡಿದೆ. ಈ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಚ್‌ ಮತ್ತು ಸುಪ್ರೀಂ ಕೋರ್ಚ್‌ನ ಆದೇಶಗಳಲ್ಲಿ ಉಲ್ಲೇಖಗಳನ್ನು ಪರಿಗಣಿಸಿರುವ ಬಿಬಿಎಂಪಿ ಇದು  ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಆದೇಶಿಸಿದೆ.