Asianet Suvarna News Asianet Suvarna News

'ಈದ್ಗಾ ಮೈದಾನ ಜಮೀರ್ ಖಾನ್‌ ಪೂರ್ವಿಕರ ಪ್ರಾಪರ್ಟಿ ಅಲ್ಲ, ನಾವು ಗಣೇಶ ಕೂರಿಸ್ತೀವಿ'

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಮಾತ್ರ ಆಚರಣೆ ಮಾಡಲು ಅವಕಾಶ. ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಅನುಮತಿ ಇಲ್ಲ ಎಂಬ ಹೇಳಿಕೆ ಮೂಲಕ ಶಾಸಕ ಜಮೀರ್ ಅಹ್ಮದ್ ವಿವಾದಕ್ಕೆ ಸೃಷ್ಟಿಸಿದ್ದಾರೆ. 
 

ಬೆಂಗಳೂರು (ಆ. 08): ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಮಾತ್ರ ಆಚರಣೆ ಮಾಡಲು ಅವಕಾಶ. ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಅನುಮತಿ ಇಲ್ಲ ಎಂಬ ಹೇಳಿಕೆ ಮೂಲಕ ಶಾಸಕ ಜಮೀರ್ ಅಹ್ಮದ್ ವಿವಾದಕ್ಕೆ ಸೃಷ್ಟಿಸಿದ್ದಾರೆ. 

ಈದ್ಗಾ ಮೈದಾನದಲ್ಲಿ ಧಾರ್ಮಿಕ ಆಚರಣೆಗಿಲ್ಲ ಅವಕಾಶ, ಜಮೀರ್ ಮಾತಿಗೆ ಹಿಂದೂ ಸಂಘಟನೆಗಳ ಆಕ್ರೋಶ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬೇಡ ಎಂದಿರುವುದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಈದ್ಗಾ ಮೈದಾನ ಜಮೀರ್ ಖಾನ್‌ ಅವರ ಪೂರ್ವಿಕರ ಪ್ರಾಪರ್ಟಿ ಅಲ್ಲ, ನಾವು ಎಲ್ಲಾ ಧರ್ಮದವರನ್ನು ಸಮನಾಗಿ ನೋಡುತ್ತೇವೆ. ಎಲ್ಲರೂ ನಮಗೆ ಸಮಾನರು ಎಂದು ಬಾಯಿ ಮಾತಿಗೆ ಹೇಳುತ್ತಾರೆ ಆದರೆ ಈ ರೀತಿ ಹೇಳಿದ್ದು ಅವರ ಮನಸ್ಥಿತಿಯನ್ನು ತೋರಿಸುತ್ತದೆ' ಎಂದು ಹಿಂದೂ ಮುಖಂಡ ಭಾಸ್ಕರನ್ ಹೇಳಿದ್ದಾರೆ. 

ಮುಸಲ್ಮಾನರ ಜಾಗದಲ್ಲಿ ಗಣೇಶನನ್ನು ಇಟ್ಟರೆ ನಿಮ್ಮದು ಭಕ್ತಿನಾ..? ನೀವು ನಿಮ್ಮ ದೇವಸ್ಥಾನಗಳಲ್ಲಿ ಕೂರಿಸಿ, ಪೂಜಿಸಿ, ಅದ್ಯಾಕೆ ವಿವಾದಿತ ಜಾಗದಲ್ಲಿ ಗಣೇಶನನ್ನು ಕೂರಿಸ್ತೀರಿ..? ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಪ್ರಶ್ನಿಸುತ್ತಾರೆ.