ಯತ್ನಾಳ್‌ಗೆ ನೋಟಿಸ್‌ ಕೊಟ್ರೆ ಸುಮ್ಮನಿರಲ್ಲ: ಬಿಜೆಪಿಗೆ ಜಯಮೃತ್ಯುಂಜಯ ಶ್ರೀ ವಾರ್ನಿಂಗ್

ವಿಜಯಪುರ ಜಿಲ್ಲೆಯ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬೆನ್ನಿಗೆ ಪಂಚಮಸಾಲಿ ಸಮುದಾಯ ನಿಂತಿದೆ. ಅವರಿಗೆ ನೋಟಿಸ್‌ ಕೊಟ್ಟರೆ ನಮ್ಮ ಸಮುದಾಯ ಸುಮ್ಮನೆ ಇರುವುದಿಲ್ಲ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

First Published Jan 17, 2023, 7:01 PM IST | Last Updated Jan 17, 2023, 7:01 PM IST

ಬೆಂಗಳೂರು (ಜ.17): ವಿಜಯಪುರ ಜಿಲ್ಲೆಯ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬೆನ್ನಿಗೆ ಪಂಚಮಸಾಲಿ ಸಮುದಾಯ ನಿಂತಿದೆ. ಅವರಿಗೆ ನೋಟಿಸ್‌ ಕೊಟ್ಟರೆ ನಮ್ಮ ಸಮುದಾಯ ಸುಮ್ಮನೆ ಇರುವುದಿಲ್ಲ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಯತ್ನಾಳ್‌ ಅವರು ಪಂಚಮಸಾಲಿ ಸಮುದಾಯದ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ನೋಟಿಸ್‌ ನೀಡಿದರೆ, ಸಮುದಾಯದ ಜನರಿಗೆ ಭಯ ಉಂಟಾಗಲಿದೆ. ಇದರಿಂದ ಮೀಸಲಾತಿ ಹೋರಾಟ ಕೈಬಿಡಬಹುದು ಎಂದು ಆಲೋಚನೆ ಮಾಡಿರಬಹುದು. ಒಂದು ವೇಳೆ ನೋಟಿಸ್‌ ನೀಡಿದ್ದೇ ಆದಲ್ಲಿ ಯತ್ನಾಳ್‌ ಅವರ ಬೆಂಬಲಕ್ಕೆ ನಮ್ಮ ಸಮಾಜ ನಿಲ್ಲಲಿದೆ. ರಾಜಕೀಯ ವೈರಿಗಳಿಂದ ಯತ್ನಾಳ್‌ ಅವರ ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ನೋಟಿಸ್‌ ಜಾರಿಗೊಳಿಸದಂತೆ ಪತ್ರ ಬರೆಯಲಾಗುವುದು. ಜೊತೆಗೆ, ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಪ್ರಕ್ರಿಯೆ ತುರ್ತಾಗಿ ಕೈಗೆತ್ತಿಕೊಂಡು, ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.