Asianet Suvarna News Asianet Suvarna News

ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿ ಅದ್ಧೂರಿ ಮೆರವಣಿಗೆ, ಕೊರೋನಾ ರೂಲ್ಸ್ ಬ್ರೇಕ್.!

Aug 15, 2021, 1:50 PM IST

ಬೆಂಗಳೂರು (ಆ. 15): ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಕೊರೋನಾ ರೂಲ್ಸ್ ಬ್ರೆಕ್ ಮಾಡಲಾಗಿದೆ. ಕೊರೋನಾ ವಾರಿಯರ್ಸ್ ಸನ್ಮಾನ ಸಮಾರಂಭಕ್ಕೆ ಶಾಸಕರನ್ನು ಚಕ್ಕಡಿ ಮೂಲಕ ಕರೆತಂದಿದ್ದಾರೆ.

ನಮ್ಮದು ಕಟ್ಟುವ ಪರಂಪರೆ, ನಿಮ್ಮದು ಕೆಡವುವ ಪರಂಪರೆ; ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಈ ವೇಳೆ ನೂರಾರು ಜನ ಸೇರಿದ್ದು, ಮಾಸ್ಕ್ ಇಲ್ಲ, ಕೊರೊನಾ ನಿಯಮ ಪಾಲನೆ ಮಾಡಿಲ್ಲ. ಧಾರವಾಡದಲ್ಲಿ 1 ತಿಂಗಳ ಅವಧಿಯಲ್ಲಿ 45 ಕ್ಕಿಂತ ಹೆಚ್ಚು ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಆದರೆ ಶಾಸಕರೇ ಹೀಗೆ ಬೇಜವಾಬ್ದಾರಿಯುತವಾಗಿ ವರ್ತಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.