Asianet Suvarna News Asianet Suvarna News

Covid Norms Flouted: ಅಭಿಮಾನಿಗಳು, ಕಾರ್ಯಕರ್ತರ ಜನಜಂಗುಳಿ ಮಧ್ಯೆ ಶಪಥಗ್ರಹಣ, ಗೃಹಸಚಿವರೇ ಏನಂತೀರಿ?

ಕುಟುಂಬ ಸದಸ್ಯರು, ಹಿರಿಯ ನಾಯಕರ ಸಮ್ಮುಖದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಘೋಷಣೆ, ಸಂಭ್ರಮದ ನಡುವೆ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (Legislative Council) ಆಯ್ಕೆಯಾದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
 

ಬೆಂಗಳೂರು (ಜ. 07): ಕುಟುಂಬ ಸದಸ್ಯರು, ಹಿರಿಯ ನಾಯಕರ ಸಮ್ಮುಖದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಘೋಷಣೆ, ಸಂಭ್ರಮದ ನಡುವೆ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (Legislative Council) ಆಯ್ಕೆಯಾದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಆಯ್ಕೆಯಾದ 25 ಸದಸ್ಯರ ಪೈಕಿ 20 ಜನರಿಗೆ ಪ್ರಮಾಣ ವಚನ ಬೋಧಿಸಲಾಯಿತು.

PM Modi Security Breach: ಸುಪ್ರೀಂ ಅಂಗಳ ತಲುಪಿದ ಭದ್ರತಾ ಲೋಪ, ಎಲ್ಲರ ಚಿತ್ತ ತೀರ್ಮಾನದತ್ತ!

ಸಮಾರಂಭಕ್ಕೆ ನೂತನ ಸದಸ್ಯರ ಕುಟುಂಬದ ಸದಸ್ಯರು, ಅಭಿಮಾನಿಗಳು, ಸ್ನೇಹಿತರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು, ಹೀಗಾಗಿ ಬ್ಯಾಂಕ್ವೆಟ್‌ ಸಭಾಂಗಣ ತುಂಬಿತ್ತು. ಪ್ರಮಾಣ ವಚನ ಸ್ವೀಕರಿಸಲು ಸದಸ್ಯರು ವೇದಿಕೆಗೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಘೋಷಣೆ, ಜೈಕಾರ ಕೂಗಿ ಸಂಭ್ರಮಿಸಿದರು.

ಕಾರ್ಯಕ್ರಮದ ನಂತರವೂ ಕೋವಿಡ್‌ ಭಯ ಇಲ್ಲದೆ ಗುಂಪು ಗುಂಪಾಗಿ ತಮ್ಮ ನಾಯಕರು, ಮುಖಂಡರ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಯಾವುದೇ ಕೋವಿಡ್‌ ನಿಯಮ ಪಾಲನೆಯಾಗಿದ್ದು ಕಂಡು ಬರಲಿಲ್ಲ. ಹಾಗಾದರೆ ಕೊರೋನಾ ಗೈಡ್‌ಲೈನ್ಸ್ ಜನಸಾಮಾನ್ಯರಿಗೆ ಮಾತ್ರನಾ..? ಜನಪ್ರತಿನಿಧಿಗಳಿಗೇನು ಇಲ್ವಾ..? ಈ ಬಗ್ಗೆ ಡಿಕೆಶಿ ಧ್ವನಿ ಎತ್ತಿದ್ದಾರೆ. ಇದು ಡಿಕೆಶಿಯವರ ಪ್ರಶ್ನೆ ಮಾತ್ರವಲ್ಲ, ಜನಸಾಮಾನ್ಯರ ಪ್ರಶ್ನೆಯೂ ಹೌದು.