Asianet Suvarna News Asianet Suvarna News

Covid 19 Surge: ಬೆಂಗಳೂರಿನಲ್ಲಿ 30540 ಮಂದಿಗೆ ಕೊರೋನಾ ಸೋಂಕು, 8 ಸೋಂಕಿತರು ಬಲಿ

 ಕೆಲ ದಿನಗಳಿಂದ ಇಳಿಕೆಯಾಗಿ ಸಮಾಧಾನ ಮೂಡಿಸಿದ್ದ ಕೊರೋನಾ ಸೋಂಕು (CoronaVirus) ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ 30,000ರ ಗಡಿ ಮೀರಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. 

ಬೆಂಗಳೂರು (ಜ. 21): ಕೆಲ ದಿನಗಳಿಂದ ಇಳಿಕೆಯಾಗಿ ಸಮಾಧಾನ ಮೂಡಿಸಿದ್ದ ಕೊರೋನಾ ಸೋಂಕು (CoronaVirus) ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ 30,000ರ ಗಡಿ ಮೀರಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಇದರೊಂದಿಗೆ ಮೊದಲ ಮತ್ತು ಎರಡನೇ ಅಲೆಯಲ್ಲಿ ದಾಖಲಾಗಿದ್ದ ಅತ್ಯಧಿಕ ಸೋಂಕಿತ ಪ್ರಕರಣಗಳು ಸಂಖ್ಯೆ ಧೂಳೀಪಟವಾಗಿದೆ.

Weekend Curfew: ಇಂದು ಸಿಎಂ ಹೈವೋಲ್ಟೇಜ್ ಮೀಟಿಂಗ್, ಸಂಭಾವ್ಯ ನಿರ್ಬಂಧಗಳೇನು..?

ನಗರದಲ್ಲಿ ಗುರುವಾರ ಬರೋಬ್ಬರಿ 30,540 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಮೊದಲು 265 ದಿನಗಳ(ಎಂಟು ತಿಂಗಳ) ಹಿಂದೆ ಏ.30ರಂದು ದಾಖಲಾಗಿದ್ದ 26,756 ಸೋಂಕಿತ ಪ್ರಕರಣಗಳು ಈವರೆಗಿನ ದಾಖಲೆಯಾಗಿತ್ತು.

ಹೊಸ ಸೋಂಕಿತರ ಪತ್ತೆಯಿಂದ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 15.13 ಲಕ್ಷಕ್ಕೆ ಏರಿಕೆಯಾಗಿದೆ. 13,195 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು ಇದುವರೆಗೆ 12.94 ಲಕ್ಷ ಜನರು ಗುಣಮುಖರಾಗಿದ್ದಾರೆ. ಎಂಟು ಮಂದಿಯ ಸಾವಿನಿಂದ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,478ಕ್ಕೆ ಹೆಚ್ಚಳವಾಗಿದೆ.