Asianet Suvarna News Asianet Suvarna News

ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು: ಸಿಎಂ ಬೊಮ್ಮಾಯಿ ನಿವಾಸಕ್ಕೆ ಕಾಂಗ್ರೆಸ್‌ ಮುತ್ತಿಗೆ ಯತ್ನ

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಸಚಿವ ಈಶ್ವರಪ್ಪ (Eshwarappa) ರಾಜೀನಾಮಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ. ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಯತ್ನಿಸಿದೆ. ಕೂಡಲೇ ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದೆ. 

First Published Apr 14, 2022, 2:42 PM IST | Last Updated Apr 14, 2022, 2:48 PM IST

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಸಚಿವ ಈಶ್ವರಪ್ಪ (Eshwarappa) ರಾಜೀನಾಮಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ. ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಯತ್ನಿಸಿದೆ. ಕೂಡಲೇ ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಹಣಿಯಲು ಕಾಂಗ್ರೆಸ್‌ಗೆ ಸಿಕ್ಕ ದೊಡ್ಡ ಅಸ್ತ್ರ ಇದಾಗಿದೆ. 

ಸಂತೋಷ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ರಾಜೀನಾಮಗೆ ಪಕ್ಷದೊಳಗೆ ಒತ್ತಾಯ

'ಸಂತೋಷ್‌ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆಯಿಂದ ಶೀಘ್ರ ಸತ್ಯಾಂಶ ಹೊರಗೆ ಬರಲಿದೆ. ವರಿಷ್ಠರಿಗೆ ಎಲ್ಲ ವಿಷಯ ತಿಳಿದಿದೆ. ನಾನೂ ಹೇಳಿದ್ದೇನೆ. ಸಚಿವ ಈಶ್ವರಪ್ಪ ಅವರು ರಾಜೀನಾಮೆ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಕರೆಸಿ ಮಾತಾಡುತ್ತೇನೆ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ.