Asianet Suvarna News Asianet Suvarna News

Covid-19: ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಸೂಚನೆ ನೀಡಿದ ಆರ್.ಅಶೋಕ್

ವೀಕೆಂಡ್, ನೈಟ್ ಕರ್ಫ್ಯೂ ರದ್ದು ಆಡುವ ಸೂಚನೆ ನೀಡಿದ ಆರ್.ಅಶೋಕ್
ಜನಜೀವನ ನಡೆಸಲು ಸರ್ಕಾರ ಅನುವು ಮಾಡಿಕೊಡಲಿದೆ ಎಂದ ಕಂದಾಯ ಸಚಿವ
ವೀಕೆಂಡ್, ನೈಟ್ ಕರ್ಫ್ಯೂ ರದ್ದು ಮಾಡುವಂತೆ ಉದ್ಯಮಿಗಳಿಂದ ಮನವಿ

ಬೆಂಗಳೂರು (ಜ. 20): ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳ ಮನವಿಗೆ ಸರ್ಕಾರ ಮಣಿಯುವ ಸಾಧ್ಯತೆ ದಟ್ಟವಾಗಿದೆ. ವೀಕೆಂಟ್ ಹಾಗೂ ನೈಟ್ ಕರ್ಫ್ಯೂ ರದ್ದು ಮಾಡಿ, ಕಠಿಣ ಕೋವಿಡ್ ನಿಯಮಗಳನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಕಂದಾಯ ಸಚಿವ ಆರ್.ಅಶೋಕ್ ಅವರ ಮಾತಿನ ಧಾಟಿ ಕೂಡ ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಫ್ಯೂಅನ್ನು ತೆಗೆದು ಹಾಕಲಿದೆ ಎನ್ನುವ ಸೂಚನೆಯಂತಿದೆ.

Covid-19: ರಾಜ್ಯದಲ್ಲಿ ರದ್ದಾಗುತ್ತಾ ನೈಟ್, ವೀಕೆಂಡ್ ಕರ್ಫ್ಯೂ?
ಜನರ ಜೀವ ಉಳಿಸಲು ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿತ್ತು. ಕೊರೋನಾ ಕೇಸ್ ಗಳಲ್ಲಿ ಹೆಚ್ಚಳವಾಗಿದ್ದರೂ ತೀವ್ರತೆ ಕಡಿಮೆ ಇದೆ. ಆ ಕಾರಣಕ್ಕಾಗಿ ಜನಜೀವನ ನಡೆಸಲು, ಬಡವರು ಹಾಗೂ ದಿನಗೂಲಿಗಳು ಕೆಲಸ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಆರ್.ಅಶೋಕ್‌ ಹೇಳಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.