Asianet Suvarna News Asianet Suvarna News

ಬೀದಿಗೆ ಬಿದ್ದ 'ಕೈ' ಶಾಸಕರ ಜಗಳ; ಸಿಎಂಗೆ ದೂರು; ಏನಿದು ಮುಸುಕಿನ ಗುದ್ದಾಟ?

ಕಾಂಗ್ರೆಸ್‌ನ ಇಬ್ಬರು ಶಾಸಕರ ಜಗಳ ಬೀದಿಗೆ ಬಂದಿದೆ. ಏ. 24 ರಂದುತಿಡಗುಂದಿ ಕಾಲುವೆಗೆ ಗಂಗಾಪೂಜೆ ,ಮೇಲ್ಸೇತುವೆ ಉದ್ಘಾಟನೆ ನಡೆದಿದೆ. ಶಾಸಕ ಎಂಬಿ ಪಾಟೀಲರು ಇದನ್ನು ಉದ್ಘಾಟಿಸಿದ್ದರು.  ಆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಯತ್ನಾಳ್, ಜೆಡಿಎಸ್‌ ಶಾಸಕ ದೇವಾನಂದ ಚೌಹಾಣ್ ಭಾಗಿಯಾಗಿದ್ದರು. ಲಾಕ್‌ಡೌನ್ ಇದ್ದಾಗ್ಯೂ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ಕೊಡಲಾಯಿತು ಎಂದು ಯಶವಂತರಾಯ್ ಪಾಟೀಲ್ ಪ್ರಶ್ನಿಸಿದ್ದಾರೆ. 

ಬೆಂಗಳೂರು (ಏ. 28): ಕಾಂಗ್ರೆಸ್‌ನ ಇಬ್ಬರು ಶಾಸಕರ ಜಗಳ ಬೀದಿಗೆ ಬಂದಿದೆ. ಏ. 24 ರಂದುತಿಡಗುಂದಿ ಕಾಲುವೆಗೆ ಗಂಗಾಪೂಜೆ ,ಮೇಲ್ಸೇತುವೆ ಉದ್ಘಾಟನೆ ನಡೆದಿದೆ. ಶಾಸಕ ಎಂಬಿ ಪಾಟೀಲರು ಇದನ್ನು ಉದ್ಘಾಟಿಸಿದ್ದರು.  ಆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಯತ್ನಾಳ್, ಜೆಡಿಎಸ್‌ ಶಾಸಕ ದೇವಾನಂದ ಚೌಹಾಣ್ ಭಾಗಿಯಾಗಿದ್ದರು. ಲಾಕ್‌ಡೌನ್ ಇದ್ದಾಗ್ಯೂ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ಕೊಡಲಾಯಿತು ಎಂದು ಯಶವಂತರಾಯ್ ಪಾಟೀಲ್ ಪ್ರಶ್ನಿಸಿದ್ದಾರೆ. 

ಗ್ರಾಪಂ ಅಧ್ಯಕ್ಷರ ಬಳಿ ಜಾಬ್‌ಕಾರ್ಡ್‌ ಇದ್ರೆ ಕ್ರಿಮಿನಲ್ ಕೇಸ್..!

ಈ ಕಾರ್ಯಕ್ರಮಕ್ಕೆ ಪ್ರೊಟೋಕಾಲ್ ಇಲ್ಲ. ಸ್ಥಳೀಯರಿಗೆ ಆಹ್ವಾನವಿರಲಿಲ್ಲ. ಆ ಶಾಸಕ ಇನ್ನೂ ನೀರಾವರಿ ಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಯಶವಂತರಾಯ್ ಪಾಟೀಲ್ ಎಂಬಿಪಾಗೆ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ, ಡಿಸಿಎಂ ಕಾರಜೋಳ, ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಶಾಸಕರಿಬ್ಬರ ಮುಸುಕಿನ ಗುದ್ದಾಟ ರಾಜಕೀಯದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ!