Asianet Suvarna News Asianet Suvarna News

ಕೊರೋನಾದಲ್ಲಿ ಕೊಚ್ಚಿ ಹೋಯ್ತಾ ಮಾನವೀಯತೆ?: ಸಂಪ್ರದಾಯದಂತೆ ನಡೆಯಲಿಲ್ಲ ತಂದೆ ಅಂತ್ಯ ಸಂಸ್ಕಾರ!

ಕೊರೋನಾ ಸದ್ಯ ರಾಜ್ಯ, ದೇಶ, ವಿಶ್ವನ್ನೇ ಕಾಡುತ್ತಿದೆ. ಹೀಗಿರುವಾಗ ಈ ಪ್ರಕೋಪದ ನಡುವೆ ಮಾನವೀಯತೆ ಎಂಬುವುದೇ ಮರೆಯಾಗತ್ತಿದೆಯಾ ಎಂಬ ಅನುಮಾನ ಕಾಡಿದೆ. ಬೆಂಗಳೂರಿನಲ್ಲಿ ಮಗನೊಬ್ಬ ಕೊರೋನಾದಿಂದ ಮೃತಪಟ್ಟ ತನ್ನ ತಂದೆಯ ಅಂತ್ಯ ಸಂಸ್ಕಾರ ಸಂಪ್ರದಾಯದಂತೆ ನಡೆಸಲಾಗದೇ, ನನ್ನಂತಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಕಣ್ಣೀರಿಟ್ಟಿದ್ದಾನೆ.

ಹೌದು ಬೆಂಗಳೂರಿನ ವಿನ್ಸೆಂಟ್ ಎಂಬಾತ ಮೃತಪಟ್ಟಿದ್ದು, ತಂದೆಯ ಮೃತದೇಹದ ಅಂತ್ಯ ಸಂಸ್ಕಾರಕ್ಕಾಗಿ ಆತನ ಮಗ ಕಾಕ್ಸ್‌ಟೌನ್ ಸ್ಮಶಾನಕ್ಕೆ ಕ್ರೈಸ್ತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲು ತೆಗೆದುಕೊಂಡು ಹೋಗಿದ್ದಾನೆ ಆದರೆ ಎರಡು ದಿನ ಮೃತದೇಹವಿಟ್ಟರೂ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಸಿಗುವುದಿಲ್ಲ.

ಅಂತಿಮವಾಗಿ ಹೆಬ್ಬಾಳ ಚಿತಾಗಾರದಲ್ಲಿ ತಂದೆಯ ಮೃತದೇಹ ಸುಟ್ಟು ಬೂದಿಇ ತಂದು ಸ್ಮಶಾನದಲ್ಲಿ ಹೂಳಲು ಮನವಿ ಮಾಡಿಕೊಂಡಿದ್ದಾನೆ. ಸಮಾಧಿಗಳ ನಡುವೆ ಚಿಕ್ಕ ಗುಂಡಿಯನ್ನು ತೋಡಿ ಸದ್ಯ ಈ ಮಗ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.